16 ಕರುಗಳು ಪೊಲೀಸರ ವಶಕ್ಕೆ

ಮಂಗಳವಾರ, ಜೂನ್ 18, 2019
24 °C

16 ಕರುಗಳು ಪೊಲೀಸರ ವಶಕ್ಕೆ

Published:
Updated:
Prajavani

ಅಥಣಿ: ತಾಲ್ಲೂಕಿನ ದರೂರ ಗ್ರಾಮದ ಬಳಿ ವಾಹನವನ್ನು ತಡೆದ ಆರ್‌ಎಸ್‌ಎಸ್‌ ಕಾರ್ಯಕರ್ತರು, ಅದರಲ್ಲಿ 16 ಕರುಗಳನ್ನು ಪೋಲಿಸರ ವಶಕ್ಕೆ ಒಪ್ಪಿಸಿದ್ದಾರೆ.

‘ಅವುಗಳನ್ನು ಸಾಗಿಸುತ್ತಿದ್ದವರು ಗೊಂದಲಕಾರಿ ಹೇಳಿಕೆ ನೀಡಿದರು. ಅವುಗಳನ್ನು ಖರೀದಿಸಿದ ಮಾಲೀಕರಾಗಲೀ, ವಾಹನದ ಮಾಲೀಕರಾಗಲೀ ಇರಲಿಲ್ಲ. ವಾಹನದಲ್ಲಿದ್ದವರು ತಾವು ಮಹಾರಾಷ್ಟ್ರದ ಸಂಗೋಲಾದವರು ಎಂದು ತಿಳಿಸಿದರು. ಚಾಲಕ ಸೇರಿ ನಾಲ್ವರು ಇದ್ದರು. ಕುಡಚಿಯಲ್ಲಿ ಮಾರಲು ಸಾಗಿಸುತ್ತಿದ್ದುದಾಗಿ ತಿಳಿಸಿದರು. ಮತ್ತೊಮ್ಮೆ ರಾಯಬಾಗಕ್ಕೆ ಎಂದರು. ಬುಧವಾರ ಅಲ್ಲಿ ಸಂತೆ ನಡೆಯುವುದಿಲ್ಲ. ಹೀಗಾಗಿ, ಅನುಮಾನ ಬಂದು ಅಥಣಿಯ ಡಿವೈಎಸ್ಪಿ ಕಚೇರಿಗೆ ತಂದು ಒಪ‍್ಪಿಸಿದ್ದೇವೆ’ ಎಂದು ಕಾರ್ಯಕರ್ತರು ಮಾಧ್ಯಮದವರಿಗೆ ತಿಳಿಸಿದರು.

ವಾಹನ ಬಿಡಲು ನಮಗೆ ಹಣ ಕೊಡುವುದಾಗಿಯೂ ತಿಳಿಸಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಗ್ರಾಮಸ್ಥರು ಜಮಾಯಿಸಿದ್ದರು ಎಂದು ತಿಳಿದುಬಂದಿದೆ.

ಡಿವೈಎಸ್ಪಿ ಕಚೇರಿ ಅವರಣದಲ್ಲೂ ಯುವಕರು ಜಮಾಯಿಸಿದ್ದರು. ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದರಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಡಿವೈಎಸ್ಪಿ ರಾಮಣ್ಣ ಬಸರಗಿ ಪರಿಸ್ಥಿತಿ ನಿಭಾಯಿಸಿದರು. ಪ್ರಕರಣದ ಬಗ್ಗೆ ತನಿಖೆ ನಡೆಸುವ ಭರವಸೆ ನೀಡಿದರು.

‘ಎಲ್ಲವೂ ಕರುಗಳೇ ಆಗಿವೆ. ವಯಸ್ಸಾದ ಆಕಳುಗಳಿಲ್ಲ. ಹೀಗಾಗಿ, ಅವುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿರಲಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದು ಡಿವೈಎಸ್ಪಿ ಪ್ರತಿಕ್ರಿಯಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !