ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಆಪರೇಷನ್‌ ಮುಸ್ಕಾನ್: 41 ಮಕ್ಕಳ ರಕ್ಷಣೆ

Published 14 ಅಕ್ಟೋಬರ್ 2023, 5:46 IST
Last Updated 14 ಅಕ್ಟೋಬರ್ 2023, 5:46 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಳಗಾವಿ ನಗರ ಹಾಗೂ ಜಿಲ್ಲಾ ವ್ಯಾಪ್ತಿಯ ಮಕ್ಕಳನ್ನು ಬಾರ್‌– ರೆಸ್ಟಾರೆಂಟ್, ಗ್ಯಾರೇಜ್‌, ಹೋಟೆಲ್‌, ಧಾಬಾಗಳು ಹಾಗೂ ಇನ್ನಿತರ ಸ್ಥಳಗಳಲ್ಲಿ ಕೆಲಸಕ್ಕೆ ನಿಯೊಜಿಸಿದ್ದು ಕಂಡುಬಂದಲ್ಲಿ ಅಂಥ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಸಿದರು.

ನಗರದಲ್ಲಿ ಗುರುವಾರ ಬೀದಿ ಬದಿ ಮಕ್ಕಳ (ಆಪರೇಷನ್‌ ಮುಸ್ಕಾನ್) ರಕ್ಷಣಾ ಕಾರ್ಯಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಮಕ್ಕಳನ್ನು ಕೆಲಸಕ್ಕೆ ಹಚ್ಚುವುದು ಶಿಕ್ಷಾರ್ಹ ಅಪರಾಧ’ ಎಂದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ ಮಾತನಾಡಿದರು. ಹಿರಿಯ ಕಾರ್ಮಿಕ ನಿರೀಕ್ಷಕ ಮಂಜುನಾಥ ಇತರರು ಇದ್ದರು.

41 ಮಕ್ಕಳ ರಕ್ಷಣೆ

ಗಾಂಧಿನಗರ, ಹೊಸ ತರಕಾರಿ ಮಾರುಕಟ್ಟೆ, ಕೇಂದ್ರ ಬಸ್ ನಿಲ್ದಾಣ, ಫೋರ್ಟ್‌ ರೋಡ್‌, ಶನಿ ಮಂದಿರ, ಖಡೇ ಬಜಾರ, ಕಂಬಳಿ ಕೂಟ, ಮಾರುತಿ ಗಲ್ಲಿ, ಬೋಗಾರವೇಸ್, ಸಮಾದೇವಿ ಗಲ್ಲಿ, ಕಾಕತಿವೇಸ್, ಚನ್ನಮ್ಮ ಸರ್ಕಲ್, ರಾಮದೇವ ಹೋಟೆಲ್‌, ಕೆ.ಎಲ್.ಇ. ಸದಾಶಿವ ನಗರ, ನೆಹರೂ ನಗರ, ಎಪಿಎಂಸಿ ರಸ್ತೆ, ಹನುಮಾನ್‌ ನಗರ, ಹಿಂಡಲಗಾ, ಗಣಪತಿ ಕ್ರಾಸ್, ರೇಲ್ವೆ ನಿಲ್ದಾಣ ಮುಂತಾದ ಕಡೆ ಚಿಂದಿ ಆಯುವ, ಶಿಕ್ಷಣ ವಂಚಿತ, ಗುಡಿಸಲುಗಳಲ್ಲಿರುವ ಭಿಕ್ಷುಕರು, ಬಾಲಕಾರ್ಮಿಕರು, ವ್ಯಾಪಾರದಲ್ಲಿ ತೊಡಗಿರುವ 45 ಮಕ್ಕಳನ್ನು ರಕ್ಷಣೆ ಮಾಡಿ, ಎಲ್ಲ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT