ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಜಮೀನುಗಳ ಮಾಲೀಕರೊಂದಿಗೆ ಸಭೆ 20ರಂದು

Last Updated 16 ಜುಲೈ 2021, 15:27 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಕಾಗವಾಡ ತಾಲ್ಲೂಕಿನ ಶೇಡಬಾಳ ಗ್ರಾಮದ ಜಮೀನುಗಳನ್ನು ಲೋಂಡಾ–ಮೀರಜ್‌ ರೈಲು ಮಾರ್ಗ ನಿರ್ಮಾಣ ಯೋಜನೆಗೆ ಭೂಸ್ವಾಧೀನಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಪ್ರಸ್ತಾಪಿತ ಜಮೀನುಗಳ ಮಾಲೀಕರೊಂದಿಗೆ ಜುಲೈ 20ರಂದು ಬೆಳಿಗ್ಗೆ 11.30ಕ್ಕೆ ಕಾಗವಾಡ ಪ್ರವಾಸಿಮಂದಿರದಲ್ಲಿ ಸಭೆ ಕರೆಯಲಾಗಿದೆ ಎಂದು ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್‌ಕುಮಾರ್‌ ತಿಳಿಸಿದ್ದಾರೆ.

ಭೂಮಾಲೀಕರ ಜಮೀನುಗಳ ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಕರಡು ಪಟ್ಟಿ ತಯಾರಿಸಲು ಕುಟುಂಬದ ಸದಸ್ಯರು, ಸಾರ್ವಜನಿಕರ ಅಹವಾಲು ಆಲಿಸಲಾಗುವುದು.

ಕಾಗವಾಡ ಗ್ರಾಮದಲ್ಲಿ ಒಟ್ಟು 9 ಎಕರೆ 2 ಗುಂಟೆ 14 ಆಣೆ ಜಮಿನನ್ನು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು ಸಂಬಂಧಿಸಿದಂತೆ ಕಲಂ 16 (1)ರಲ್ಲಿ ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಕರಡು ಪಟ್ಟಿ ತಯಾರಿಸಿ ಪಡೆಯಬೇಕಿದೆ. ಬಾಧಿತಗೊಳ್ಳುವ ಕುಟುಂಬದ ಎಲ್ಲ ವಯಸ್ಕ ಸದಸ್ಯರು ಕ್ಲೇಮುಗಳು ಹಾಗೂ ಆಕ್ಷೇಪಣೆ ಇದ್ದಲ್ಲಿ ಸಭೆಯಲ್ಲಿ ಲಿಖಿತವಾಗಿ ಸಲ್ಲಿಸಬೇಕು’ ಎಂದು ತಿಳಿಸಿದ್ದಾರೆ.

ಉದ್ಘಾಟನೆ ಜುಲೈ 17ರಂದು

ಬೆಳಗಾವಿ: ರಾಯಬಾಗ ಶಾಖಾ ಗ್ರಂಥಾಲಯ ಕಟ್ಟಡ ಹಾಗೂ ಡಿಜಿಟಲ್ ಗ್ರಂಥಾಲಯದ ಉದ್ಘಾಟನೆಯನ್ನು ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಅಗಿರುವ ಶಾಸಕ ದುರ್ಯೋಧನ ಐಹೊಳೆ ಜುಲೈ 17ರಂದು ನೆರವೇರಿಸಲಿದ್ದಾರೆ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ರಾಮಯ್ಯ
ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT