ಶನಿವಾರ, ನವೆಂಬರ್ 23, 2019
18 °C

ಎರಡೂ ಮಕ್ಕಳಿಗೆ ನೇಣು ಬಿಗಿದು, ತಂದೆ–ತಾಯಿ ಆತ್ಮಹತ್ಯೆ

Published:
Updated:

ಗೋಕಾಕ: ತಮ್ಮ ಎರಡೂ ಗಂಡು ಮಕ್ಕಳಿಗೆ ನೇಣು ಬಿಗಿದು ಹತ್ಯೆ ಮಾಡಿದ ತಂದೆ– ತಾಯಿ, ಅದೇ ಮನೆಯಲ್ಲಿ ನೇಣಿಗೆ ಶರಣಾದ ಘಟನೆ ತಾಲ್ಲೂಕಿನ ಹೊಸೂರ (ಕೈತನಾಳ) ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ಗ್ರಾಮದ ಭೀಮಪ್ಪ ಸಿದ್ದಪ್ಪ ಚೂನಪ್ಪಗೋಳ (45), ಪತ್ನಿ ಮಂಜುಳಾ (35) ಹಾಗೂ ಅವರ ಮಕ್ಕಳಾದ ಪ್ರದೀಪ (8) ಹಾಗೂ ಮೋಹನ (6) ಮೃತರಾದವರು ಎಂದು ಗುರುತಿಸಲಾಗಿದೆ.

ತಮ್ಮ ಇಬ್ಬರೂ ಮಕ್ಕಳನ್ನು ನೇಣುಬಿಗಿದು ಹತ್ಯೆ ಮಾಡಿದ ನಂತರ ಪಾಲಕರು ನೇಣಿಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹವೇ ಇದಕ್ಕೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)