ಭಾನುವಾರ, ನವೆಂಬರ್ 29, 2020
25 °C

‘ರಾಣಿ ಚನ್ನಮ್ಮ ಆದರ್ಶ ಅಳವಡಿಸಿಕೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಐಗಳಿ: ‘ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಚನ್ನಮ್ಮನ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡು, ಸಮಾಜಮುಖಿ ಕಾರ್ಯ ಮಾಡಬೇಕು’ ಎಂದು ಬಸವೇಶ್ವರ ಪಿ.ಕೆ.ಪಿ.ಎಸ್. ಅಧ್ಯಕ್ಷ ಎ.ಬಿ. ನೇಮಗೌಡ ಹೇಳಿದರು.

ಕಿತ್ತೂರು ವಿಜಯೋತ್ಸವ ಅಂಗವಾಗಿ ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮ ಫೊಟೊಗೆ ಶುಕ್ರವಾರ ಪೂಜೆ ನೆರವೇರಿಸಿ ಮಾತನಾಡಿದರು.

‘ಬ್ರಿಟಿಷರ ಬಹು ದೊಡ್ಡ ಸೈನ್ಯದ ವಿರುದ್ಧ ಹೋರಾಡಿದದ ಆ ಮಹಿಳೆ ಇಡೀ ಜಗತ್ತಿನಾದ್ಯಂತ ವೀರ ರಾಣಿ ಎನಿಸಿದ್ದಾರೆ’ ಎಂದರು.

ಮುಖಂಡ ಶಿವಾನಂದ ಸಿಂಧೂರ, ‘ಸತತ ಮಳೆಯಿಂದ ಗೋವಿನ ಜೋಳ, ಕಬ್ಬು, ತೊಗರಿ, ದ್ರಾಕ್ಷಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಮೆಕ್ಕೆಜೋಳ ತೆನೆಯಲ್ಲಿ ಮೊಳಕೆಗಳು ಬಂದಿವೆ. ಸರ್ಕಾರ ಅನ್ನದಾತನಿಗೆ ಸಮರ್ಪಕ ಬೆಳೆ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಶಿವನಿಂಗ ಅರಟಾಳ, ಅಪ್ಪಾಸಾಬ ಭೀ. ತೆಲಸಂಗ, ಶಿವಾನಂದ ಪಾಟೀಲ, ಅಣ್ಣಾರಾಯ ಹಾಲಳ್ಳಿ, ಈರಪ್ಪ ಅರಟಾಳ, ಶಂಕರ ಹಿಪ್ಪರಗಿ, ರಾಮು ಹಾಲಳ್ಳಿ, ಅಜೀತ ಜತ್ತಿ, ರವಿ ಹಾಲಳ್ಳಿ, ಮುಲಗೌಡ ಪಾಟೀಲ, ಅಪ್ಪಾಸಾಬ ಮದಬಾವಿ, ಸಿದ್ದು ಮುದಗೌಡರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.