ಬುಧವಾರ, ನವೆಂಬರ್ 25, 2020
22 °C

ಆನೆತಜ್ಞ ಅಜಯ್‌ ದೇಸಾಯಿ ನಿಧನ

‍ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

ಬೆಳಗಾವಿ: ಆನೆಗಳ ಕುರಿತು ಸುದೀರ್ಘ ಅಧ್ಯಯನ ನಡೆಸಿ ಹೊಸ ಒಳನೋಟಗಳಿಂದ ವಿಶ್ವವನ್ನು ಬೆರಗುಗೊಳಿಸಿದ್ದ ಕನ್ನಡಿಗ ಅಜಯ್‌ ಎ.ದೇಸಾಯಿ ಹೃದಯಾಘಾತದಿಂದ ನಗರದ ಕ್ಯಾಂಪ್‌ ಪ್ರದೇಶದಲ್ಲಿರುವ ಸ್ವಗೃಹದಲ್ಲಿ ಶುಕ್ರವಾರ ಅಸ್ತಂಗತರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು.

ಅವರಿಗೆ ಪತ್ನಿ, ಇಬ್ಬರು ಪುತ್ರರು, ಸಹೋದರಿ ಹಾಗೂ ಡಾ.ಅರವಿಂದ ದೇಸಾಯಿ ಸೇರಿದಂತೆ ಇಬ್ಬರು ಸಹೋದರರು ಇದ್ದಾರೆ. ಸಂಜೆ ಅಂತ್ಯಕ್ರಿಯೆ ನೆರವೇರಿತು. ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಕೊಣ್ಣೂರಿನವರು.

ಬೆಳಗಾವಿ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಂತಿಮ ದರ್ಶನ ಪಡೆದು ಸಮವಸ್ತ್ರ ಗೌರವ ಸಲ್ಲಿಸಿದರು.

ಧಾರವಾಡ ವಿ.ವಿ.ಯಲ್ಲಿ ಎಂ.ಎಸ್ಸಿ ಪದವಿ ಪಡೆದಿದ್ದ ಅವರು ಅಮೆರಿಕದ ಸ್ಮಿತ್‌ಸೋನಿಯನ್‌ ಸಂಸ್ಥೆಯಲ್ಲಿ ವನ್ಯಜೀವಿ ತರಬೇತಿ ಪಡೆದಿದ್ದರು. ಬಾಂಬೆ ನ್ಯಾಚುರಲ್ ಹಿಸ್ಟರಿ ಸಂಸ್ಥೆಯ ವಿಜ್ಞಾನಿಯಾಗಿ ಹತ್ತು ವರ್ಷಗಳ ಕಾಲ ನೀಲಗಿರಿ ಜೈವಿಕ ವಲಯದಲ್ಲಿ ಸಂಶೋಧನೆ ನಡೆಸಿ, ಆನೆಗಳ ಖಾಸಗಿ ಬದುಕು ಮತ್ತು ಸ್ವಭಾವಗಳನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಿದ್ದರು. ಅವರು ತೆರೆದಿಟ್ಟ ಹಲವಾರು ಹೊಸ ವಿಷಯಗಳು ವಿಜ್ಞಾನ ಲೋಕದಲ್ಲಿ ಸಂಚಲನ ಮೂಡಿಸಿದ್ದವು.

ಆನೆಗಳ ದೀರ್ಘಕಾಲದ ಸಂರಕ್ಷಣೆಯ ರೂಪುರೇಶಗಳನ್ನು ಸಾಕಾರಗೊಳಿಸಲು, ತಮ್ಮ ಜೀವನ ಪರ್ಯಂತ ಗಳಿಸಿದ ಅಪಾರ ಜ್ಞಾನವನ್ನೆಲ್ಲ ವ್ಯಯಿಸುತ್ತಿದ್ದರು. ಅವರ ಸೇವೆ ಭಾರತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಶ್ರೀಲಂಕಾ, ಕಾಂಬೋಡಿಯಾ, ವಿಯಟ್ನಾಂ, ಇಂಡೋನೇಷಿಯಾ, ಭೂತಾನ್‌, ನೇಪಾಳ, ಲಾವೋಸ್‌, ಮಲೇಷಿಯಾ ದೇಶಗಳೂ ಕೂಡ ಅವರ ಅನುಭವದ ಲಾಭ ಪಡೆದುಕೊಂಡಿದ್ದವು.

ವನ್ಯಜೀವಿ ಸಂರಕ್ಷಣೆಯ ಸುದೀರ್ಘ ಪಯಣದಲ್ಲಿ ಭಾರತ ಸರ್ಕಾರದ ‘ಆನೆ ಯೋಜನೆ’ಯ ಸಹ ಅಧ್ಯಕ್ಷರಾಗಿ, ಹುಲಿ ಯೋಜನೆಯ ಸಲಹೆಗಾರರಾಗಿ, ಕೇಂದ್ರ ವಿಜ್ಞಾನ ಪರಿಸರ ಮತ್ತು ಅರಣ್ಯ ಇಲಾಖೆಗಳ ಮಾರ್ಗದರ್ಶಕರಾಗಿದ್ದರು.

ಪರಿಸರ ಸಂರಕ್ಷಣೆಯಲ್ಲಿ ದೂರದೃಷ್ಟಿ ಇದ್ದ ಅಪರೂಪದ ವಿಜ್ಞಾನಿ ಎಂದೇ ಅವರು ಗೌರವಕ್ಕೆ ಪಾತ್ರರಾಗಿದ್ದರು.

 

ಅವರು ತೆರೆದಿಟ್ಟ ಹಲವಾರು ಹೊಸ ವಿಷಯಗಳು ವಿಜ್ಞಾನ ಲೋಕದಲ್ಲಿ ಸಂಚಲನ ಮೂಡಿಸಿದ್ದವು.

ಆನೆಗಳ ದೀರ್ಘಕಾಲದ ಸಂರಕ್ಷಣೆಯ ರೂಪುರೇಶಗಳನ್ನು ಸಾಕಾರಗೊಳಿಸಲು, ತಮ್ಮ ಜೀವನ ಪರ್ಯಂತ
ಗಳಿಸಿದ ಅಪಾರ ಜ್ಞಾನವನ್ನೆಲ್ಲ ವ್ಯಯಿಸುತ್ತಿದ್ದರು. ಅವರ ಸೇವೆ ಭಾರತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಶ್ರೀಲಂಕಾ,
ಕಾಂಬೋಡಿಯಾ, ವಿಯಟ್ನಾಂ, ಇಂಡೋನೇಷಿಯಾ, ಭೂತಾನ್‌, ನೇಪಾಳ, ಲಾವೋಸ್‌, ಮಲೇಷಿಯಾ ದೇಶಗಳೂ ಕೂಡ ಅವರ ಅನುಭವದ ಲಾಭ ಪಡೆದುಕೊಂಡಿದ್ದವು.

ವನ್ಯಜೀವಿ ಸಂರಕ್ಷಣೆಯ ಸುದೀರ್ಘ ಪಯಣದಲ್ಲಿ ಭಾರತ ಸರ್ಕಾರದ ‘ಆನೆ ಯೋಜನೆ’ಯ ಸಹ ಅಧ್ಯಕ್ಷರಾಗಿ, ಹುಲಿ ಯೋಜನೆಯ ಸಲಹೆಗಾರರಾಗಿ, ಕೇಂದ್ರ ವಿಜ್ಞಾನ ಪರಿಸರ ಮತ್ತು ಅರಣ್ಯ ಇಲಾಖೆಗಳ ಮಾರ್ಗದರ್ಶಕರಾಗಿದ್ದರು.

ಪರಿಸರ ಸಂರಕ್ಷಣೆಯಲ್ಲಿ ದೂರದೃಷ್ಟಿ ಇದ್ದ ಅಪರೂಪದ ವಿಜ್ಞಾನಿ ಎಂದೇಅವರು ಗೌರವಕ್ಕೆ ಪಾತ್ರರಾಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.