ಗುರುವಾರ , ಆಗಸ್ಟ್ 22, 2019
22 °C

ಅಂಬೋಲಿ ಘಾಟ್‌ನಲ್ಲಿ ಭೂ ಕುಸಿತ: ಸಂಚಾರ ಸ್ಥಗಿತ

Published:
Updated:

ಬೆಳಗಾವಿ: ನೆರೆಯ ಮಹಾರಾಷ್ಟ್ರದ ಅಂಬೋಲಿ ಘಾಟ್‌ ರಸ್ತೆಯ ಅಲ್ಲಲ್ಲಿ ಮಳೆಯಿಂದಾಗಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿದ್ದು, ಆ ಮಾರ್ಗದಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ ಈ ರಸ್ತೆಯ ಬದಿಯಲ್ಲಿಯೇ ಇರುವ ಪ್ರಖ್ಯಾತ ಅಂಬೋಲಿ ಫಾಲ್ಸ್‌ ಸೇರಿದಂತೆ ವಿವಿಧ ಜಲಪಾತಗಳನ್ನು ಕಣ್ತುಂಬಿಕೊಳ್ಳಲು ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ನೂರಾರು ಮಂದಿ ಈ ರಸ್ತೆಯಲ್ಲಿ ಪ್ರಯಾಣಿಸುತ್ತಾರೆ. ಅಲ್ಲದೇ, ಬೆಳಗಾವಿಯಿಂದ ಗೋವಾ ಸಂಪರ್ಕಿಸುವ ಹೆದ್ದಾರಿಗಳಲ್ಲಿ ಇದೂ ಒಂದಾಗಿದೆ. ಇದು ಬಂದ್ ಆಗಿರುವುದರಿಂದ ಸಾವಂತವಾಡಿ–ಗೋವಾದ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕೊಡುತ್ತಿಲ್ಲ.

‘ದುರಸ್ತಿ ಆಗುವವರೆಗೆ ಈ ಮಾರ್ಗದಲ್ಲಿ ಸಂಚರಿಸಬಾರದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Post Comments (+)