ಡೆಂಗಿ, ಚಿಕೂನ್ಗುನ್ಯಾ ನಿರೋಧಕ ಲಸಿಕೆ

ಬೆಳಗಾವಿ: ‘ಧಾರಾಕಾರ ಮಳೆಯಿಂದಾಗಿ ಡೆಂಗಿ, ಚಿಕೂನ್ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದಾಗಿ ದಕ್ಷಿಣ ಮತ ಕ್ಷೇತ್ರ ವ್ಯಾಪ್ತಿಯ ನಿವಾಸಿಗಳಿಗೆ ರೋಗ ನಿರೋಧಕ ಲಸಿಕೆಗಳನ್ನು ನೀಡುವ ಕಾರ್ಯಾಚರಣೆಯನ್ನು ಭಾನುವಾರ ನಡೆಸಲಾಯಿತು’ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.
‘ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಾರ್ವಜನಿಕ ಸ್ಥಳಗಳು ಹಾಗೂ ಮನೆಗಳಿಗೆ ತೆರಳಿದ ಸ್ವಚ್ಛ ಬೆಳಗಾವಿ ತಂಡದ 123 ಮಂದಿ ಸದಸ್ಯರು ಲಸಿಕೆ ಹಾಕಿದರು. ಶಹಾಪುರ, ವಡಗಾವಿ, ಖಾಸಬಾಗ್, ಹೊಸೂರ, ಅನಗೋಳ, ಉದ್ಯಮಬಾಗ್, ಮರಾಠಾ ಕಾಲೊನಿಗಳ 9,600 ಮಂದಿಗೆ ಲಸಿಕೆ ನೀಡಲಾಗಿದೆ. ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುವುದಕ್ಕಿಂತಲೂ ಮುಂಚಿತವಾಗಿಯೇ ನಮ್ಮ ತಂಡದ ಸದಸ್ಯರು ಈ ಕಾರ್ಯ ಕೈಗೊಂಡಿದ್ದಾರೆ. ಕ್ಷೇತ್ರದ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.