ಹುಕ್ಕೇರಿ: ಯಾವುದೇ ಧರ್ಮದ ಹಬ್ಬ, ಹರಿದಿನ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕು. ಜನರು ಪ್ರೀತಿ ವಿಶ್ವಾಸದಿಂದ ಹಬ್ಬ ಆಚರಣೆ ಮಾಡಬೇಕು ಎಂದು ಗೋಕಾಕ ಉಪವಿಭಾಗದ ಡಿವೈ.ಎಸ್.ಪಿ. ರವಿ ನಾಯ್ಕ ಹೇಳಿದರು.

ಸ್ಥಳೀಯ ಪೊಲೀಸ್ ಠಾಣಾ ಆವರಣದಲ್ಲಿ ಜೂ.7 ರಂದು ಜರುಗುವ ಬಕ್ರೀದ್ ಸಲುವಾಗಿ ಶುಕ್ರವಾರ ನಡೆದ ‘ಶಾಂತಿ ಪಾಲನೆ ಸಭೆ’ಯಲ್ಲಿ ಮಾತನಾಡಿದರು.

ಹಿರಿಯರು ಯುವಕರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು. ಅಂಥ ಸಂದರ್ಭದಲ್ಲಿ ಎಲ್ಲರೂ ಕಾನೂನು ಪರಿಪಾಲನೆ ಮಾಡಿ ಶಾಂತತೆ ಕಾಪಾಡಬೇಕು. ಜನರಿಂದ ಜನರಿಗಾಗಿ ಇರುವ ಹಬ್ಬಗಳು ಸಂತಸ ಸಂಭ್ರಮ ತರಬೇಕು. ಅದು ಬಿಟ್ಟು ಕೆಲವೊಂದು ಕಿಡಿಗೇಡಿಗಳಿಂದ ಶಾಂತಿ ಭಂಗ ಬರಬಾರದು. ಹಿರಿಯರು ಆ ಕಡೆ ಲಕ್ಷ ಕೊಡಬೇಕು. ಸಮಾಜ ಘಾತುಕ ಶಕ್ತಿ ಹತ್ತಿಕ್ಕಬೇಕು ಎಂದರು.

ಗೌರವ: ಪ್ರಥಮ ಬಾರಿಗೆ ಠಾಣೆಗೆ ಆಗಮಿಸಿದ ಡಿವೈಎಸ್ಪಿ ರವಿ ನಾಯ್ಕ ಅವರಿಗೆ ಪಿಐ ಮಹಾಂತೇಶ ಬಸ್ಸಾಪುರ ಅವರು ಪೊಲೀಸ್ ವಂದನೆ ಸಲ್ಲಿಸಿ ಬರಮಾಡಿಕೊಂಡರು.

ಸತ್ಕಾರ: ಪಟ್ಟಣದ 11 ಜಮಾತ್ ಅಧ್ಯಕ್ಷ ಸಲಿಂ ನದಾಫ್, ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ, ಪುರಸಭೆ ವತಿಯಿಂದ ಮಹಾಂತೇಶ, ಅಣ್ಣಾಗೌಡ, ರಾಜು, ಗುರುರಾಜ ಕುಲಕರ್ಣಿ, ಮುಸ್ಲಿಂ ಸಮುದಾಯದವರು ಗೂಗುಚ್ಛ ನೀಡಿ ಸತ್ಕರಿಸಿದರು.

ಪಿಐ ಮಹಾಂತೇಶ ಬಸ್ಸಾಪುರ, ಹನ್ನೊಂದು ಜಮಾತ ಅಧ್ಯಕ್ಷ ಸಲಿಂ ನದಾಫ್, ಮುಖಂಡ ಮೊಮೀನ್ ದಾದಾ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ಅಧ್ಯಕ್ಷ, ಪುರಸಭೆ ಸದಸ್ಯ ಮಹಾವೀರ ನಿಲಜಗಿ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಗುರುರಾಜ ಕುಲಕರ್ಣಿ ಸಭೆ ಉದ್ಧೇಶಿಸಿ ಮಾತನಾಡಿದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ತಳವಾರ, ಸದಸ್ಯರಾದ ಅಣ್ಣಾಗೌಡ ಪಾಟೀಲ್, ರಾಜು ಮುನ್ನೋಳಿ, ಮುಖಂಡರಾದ ಸುಭಾಸ ನಾಯಿಕ, ಸಲಿಂ ಕಳಾವಂತ, ಕಬೀರ ಮಲಿಕ್, ಇರ್ಷಾದ್ ಮೊಕಾಶಿ ಸೇರಿದಂತೆ ಹಿಂದೂ–ಮುಸ್ಲಿಂ ಸಮುದಾಯ ಮುಖಂಡರು ಪಾಲ್ಗೊಂಡಿದ್ದರು.ಪೊಲೀಸ್ ಇನ್ಸಪೆಕ್ಟರ್ ಮಹಾಂತೇಶ ಬಸ್ಸಾಪುರ ಸ್ವಾಗತಿಸಿದರು. ಮಂಜು ಕಬ್ಬೂರಿ ನಿರೂಪಿಸಿದರು. ಎಸ್.ಎಂ.ಸನ್ನಕ್ಕಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.