ಭಾನುವಾರ, ಮೇ 22, 2022
21 °C

ಮರಾಠಿಯಲ್ಲಿ ಮಾತನಾಡುವಂತೆ ಕರ್ನಾಟಕದ ಲಾರಿ ಚಾಲಕನಿಗೆ ಹಲ್ಲೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH File

ಬೆಳಗಾವಿ: ಮಹಾರಾಷ್ಟ್ರದ ಸತಾರಾ ಟೋಲ್‌ ಬಳಿ ಅಲ್ಲಿನ ಕಿಡಿಗೇಡಿಗಳು, ಕರ್ನಾಟಕದ ಲಾರಿ ಚಾಲಕರೊಬ್ಬರನ್ನು ಅರೆಬೆತ್ತಲೆಯಾಗಿಸಿ ಥಳಿಸಿ, ಮರಾಠಿಯಲ್ಲಿ ಮಾತನಾಡುವಂತೆ ಬಲವಂತ ಮಾಡಿದ ಶುಕ್ರವಾರ ಘಟನೆ ನಡೆದಿದೆ.

ಚಾಲಕ ಗೋವಿಂದ ಎನ್ನುವವರು ಹಲ್ಲೆಗೆ ಒಳಗಾದರು.

‘ಘಟನೆಯಿಂದ ನೊಂದಿರುವ ಹಾಗೂ ಅವಮಾನಿತವಾಗಿರುವ ಗೋವಿಂದ ಅಳುತ್ತಾ ನನಗೆ ಕರೆ ಮಾಡಿದ್ದರು. ನಾನು ವಿಷಯವನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಗಮನಕ್ಕೆ ತಂದಿದ್ದೇನೆ. ತನಿಖೆ ನಡೆಸುವಂತೆ ಅಥಣಿ ಡಿವೈಎಸ್ಪಿಗೆ ಸೂಚನೆ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದ್ದಾರೆ.

ಪ್ರತಿಕ್ರಿಯೆಗೆ ಎಸ್ಪಿ ಲಭ್ಯವಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು