ಭಾನುವಾರ, ಸೆಪ್ಟೆಂಬರ್ 19, 2021
29 °C

ವಿವೇಕಾನಂದರ ಸಂದೇಶ ಅಳವಡಿಸಿಕೊಳ್ಳಿ: ಸ್ವಾಮಿ ನಿರ್ಭಯಾನಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ‘ವಿವೇಕಾನಂದರ ಸಂದೇಶಗಳು ಯುವಜನರಿಗೆ ಸ್ಫೂರ್ತಿಯಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ವಿಜಯಪುರ–ಗದಗ ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ನಿರ್ಭಯಾನಂದ ಹೇಳಿದರು.

ಇಲ್ಲಿನ ಬಣಜವಾಡ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ‘ಇಂಪಲ್ಸ್–4’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಿಜವಾಗಿ ಮೂರು ದೇವತೆಗಳು ಇರುತ್ತವೆ. ಛಲ, ಪ್ರಯತ್ನ ಮತ್ತು ಗುರುಭಕ್ತಿಯೇ ಅವು. ಇವುಗಳನ್ನು ಇಟ್ಟುಕೊಂಡು ದೃಢವಾದ ಪ್ರತಿಜ್ಞೆ ಮಾಡಬೇಕು’ ಎಂದರು.

ಪ್ರಾಚಾರ್ಯ ಬಸವರಾಜ, ಸ್ಥಳೀಯ ಆಡಳಿತ ಮಂಡಳಿ ಸಮಿತಿ ಸದಸ್ಯ ಅಮರ ದುರ್ಗಣ್ಣವರ ಮಾತನಾಡಿದರು.

ಸಂಸ್ಥಾಪಕ ಎಲ್.ಎನ್. ಬಣಜವಾಡ, ಉಪನ್ಯಾಸಕರಾದ ಸೈಯದ್‌ ರಿಯಾಜ್‌ ಖತೀಬ, ಎಂ.ಎನ್. ಧರಿಗೌಡ, ಎಂ.ಡಿ. ದೇಶಪಾಂಡೆ, ಕುಮಾರ ಅಜೂರೆ, ಸತೀಶ ಮಗದುಮ್, ಬಾಹುಬಲಿ ಚೌಗಲಾ, ಅನಿತಾ ಬಣಜವಾಡ, ಪ್ರಭು ಕೋಟ್ಯಾಳ, ಕಾಶಿನಾಥ ಹೂಗಾರ, ಕಿರಣ ಬಗನಳ್ಳಿ, ಬಸವರಾಜ ಖೋತ, ಗಾಯತ್ರಿ ಖವಟಕೊಪ್ಪ, ಸವಿತಾ ಕೋಳಿ, ಅಪರ್ಣಾ ಹೂಲಿ, ಸುರೇಖಾ ಸಿದ್ಧಾಪೂರ, ಅಪೂರ್ವಾ ಮಠಪತಿ, ವರ್ಷಾ ಪಾಟೀಲ, ಧನಶ್ರೀ ದೇಶಪಾಂಡೆ, ಪ್ರಿಯಾ ಪಾಟೀಲ, ಭಾಗ್ಯಶ್ರೀ, ರವೀಂದ್ರ ಕಲಾಜ, ರಮೇಶ ಸಂತಗೋಳ, ಉದಯ ಕೋಟಿವಾಲೆ, ಭರತೇಶ ಘಟನಟ್ಟಿ, ಮಹಾಂತಯ್ಯ ವಿರಕ್ತಮಠ, ಮಹಾದೇವ ಸೊಲ್ಲಾಪೂರೆ, ಶೀತಲ ಸಿದ್ದವಗೋಳ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು