ಚಿಕ್ಕೋಡಿ: ‘ಶಿಕ್ಷಕರು ಮಕ್ಕಳಿಗೆ ಗುರಿಯ ಬಗ್ಗೆ ಹೇಳಿಕೊಡಬೇಕು. ಮಕ್ಕಳಲ್ಲಿ ಏಕಾಗ್ರತೆ ಮೂಡಿಸಬೇಕು, ನಗು ನಗುತ್ತ ಪಾಠ ಮಾಡಬೇಕು’ ಎಂದು ರಾಜ್ಯ ಮಟ್ಟದ ಉತ್ತಮ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಪದ್ಮಶ್ರೀ ರೂಗೆ ಸಲಹೆ ನೀಡಿದರು.
ಪಟ್ಟಣದ ಆರ್.ಡಿ ಹೈಸ್ಕೂಲ್‌ನ ಧೋಂಡಿರಾಜ್ ಸಭಾ ಭವನದಲ್ಲಿ ರೋಟರಿ ಕ್ಲಬ್ ಸಹಯೋಗದಲ್ಲಿ ಶನಿವಾರ ‘ರಾಷ್ಟ್ರ ನಿರ್ಮಾಣ ಪ್ರಶಸ್ತಿ’ಯನ್ನು ಶಿಕ್ಷಕರಿಗೆ ವಿತರಿಸಿ ಅವರು ಮಾತನಾಡಿದರು.
ಶಿಕ್ಷಕ ಉಮೇಶ ತೋಟದ ಮಾತನಾಡಿ, ‘ಶಿಕ್ಷಕರನ್ನು ಮಕ್ಕಳು ಅನುಕರಣೆ ಮಾಡುತ್ತಾರೆ. ಹೀಗಾಗಿ ಶಿಕ್ಷಕರು ಎಚ್ಚರಿಕೆಯಿಂದ ಪಾಠ ಮಾಡಬೇಕು’ ಎಂದು ಹೇಳಿದರು.
ವಿವಿಧ ಶಾಲೆಗಳಲ್ಲಿ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸಿದ 13 ಶಿಕ್ಷಕರಿಗೆ ರೋಟರಿ ಕ್ಲಬ್‌ನಿಂದ ‘ರಾಷ್ಟ್ರ ನಿರ್ಮಾಣ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಚಿಕ್ಕೋಡಿ ರೋಟರಿ ಕ್ಲಬ್ ಅಧ್ಯಕ್ಷ ಶಿರಿಶ್ ಮೇಹತಾ, ಕಾರ್ಯದರ್ಶಿ ಶ್ರೀಧರ ಗಜ್ಜನ್ನವರ, ಅರುಣ ಮಾಳಿ, ರಾಜ್ ಜಾಧವ, ಜಯಶ್ರೀ ಕುಲಕರ್ಣಿ, ಸಂಕೇತ ಮಾಂಜರೇಕರ, ಆನಂದ ಅರವಾರೆ ಇದ್ದರು.