ಭಾನುವಾರ, ಆಗಸ್ಟ್ 1, 2021
27 °C

ಬಕ್ರೀದ್‌; ಸರಳವಾಗಿ ಆಚರಿಸಿದ ಮುಸ್ಲಿಂ ಬಾಂಧವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ಶನಿವಾರ ಮುಸ್ಲಿಂ ಬಾಂಧವರು ಬಕ್ರೀದ್‌  ಹಬ್ಬವನ್ನು ಸರಳವಾಗಿ ಆಚರಿಸಿದರು.

ಪ್ರತಿವರ್ಷ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಆದರೆ, ಈ ಸಲ ಕೋವಿಡ್‌ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ನಿರ್ಬಂಧಿಸಲಾಗಿತ್ತು. ಹಾಗಾಗಿ, ಮಸೀದಿಗಳಲ್ಲಿ ಹಾಗೂ ಮನೆಗಳಲ್ಲಿ ಪರಸ್ಪರ ಅಂತರ ಕಾಪಾಡಿಕೊಂಡು ಪ್ರಾರ್ಥನೆ ಸಲ್ಲಿಸಿದರು. ಅಡುಗೆ ಕೂಡ ಸರಳವಾಗಿತ್ತು. ಪ್ರತಿವರ್ಷ ಹೊಸ ಉಡುಗೆ ತೊಟ್ಟು ಹಬ್ಬ ಆಚರಿಸುತ್ತಿದ್ದ ಆ ಸಂಭ್ರಮ ಕಾಣಲಿಲ್ಲ.

ಪ್ರತಿ ವರ್ಷ ತಮ್ಮ ನೆಂಟರು ಹಾಗೂ ಸ್ನೇಹಿತರನ್ನು ವಿಶೇಷ ಊಟಕ್ಕಾಗಿ ಆಹ್ವಾನಿಸುತ್ತಿದ್ದರು. ಆದರೆ, ಈ ಸಲ ಯಾರನ್ನೂ ಆಹ್ವಾನಿಸಲಿಲ್ಲ. ಮನೆಯ ಸದಸ್ಯರೇ ಸೇರಿ, ಹಬ್ಬ ಆಚರಿಸಿದರು.

ಸುರಕ್ಷಾ ಕ್ರಮ: ಪ್ರಾರ್ಥನೆ ಮಾಡಲು ಬರುವವರಿಗೆ ಎಲ್ಲ ರೀತಿಯಿಂದಲೂ ಸುರಕ್ಷತಾ ಕ್ರಮ ಕೈಗೊಳ್ಳಲಾಗಿತ್ತು. ಪ್ರವೇಶ ದ್ವಾರಗಳಲ್ಲಿ ಒಳಬರುವವರನ್ನು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತಿತ್ತು. ಸ್ಯಾನಿಟೈಸರ್‌ ಒದಗಿಸಲಾಗಿತ್ತು. ಪಾಳೆಯ ಪ್ರಕಾರ ಪ್ರಾರ್ಥನೆಗೆ ಅವಕಾಶ ನೀಡಲಾಯಿತು. ಏಕಕಾಲಕ್ಕೆ ಗರಿಷ್ಠ 50 ಜನರಿಗಷ್ಟೇ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಪ್ರಾರ್ಥನೆ ನಂತರ ಯಾರೂ ಹಸ್ತಲಾಘವ ಮಾಡಲಿಲ್ಲ. ಆಲಿಂಗನಕ್ಕೂ ಅವಕಾಶವಿರಲಿಲ್ಲ.

ಕರೊನಾ ನಿಯಂತ್ರಣಕ್ಕಾಗಿ ಸರ್ಕಾರಿ ಪ್ರಕಟಿಸಿದ್ದ ಮಾರ್ಗಸೂಚಿ ಪಾಲಿಸಿದ ಮುಸ್ಲಿಮರು, ಕರೊನಾ ಸೇನಾನಿಗಳಿಗೆ ಗೌರವ ಸಲ್ಲಿಸಿದರು. ದೇಶವು ಕರೊನಾ ಮುಕ್ತವಾಗಲಿ. ಕರೊನಾದಿಂದ ಬಳಲುತ್ತಿರುವವರು ಬೇಗ ಗುಣಮುಖರಾಗಲಿ. ಸರ್ವರ ಬಾಳಿನಲ್ಲಿ ಅಂಧಕಾರ ಮರೆಯಾಗಿ, ಬೆಳಕು ಮೂಡಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು