ಮಮದಾಪುರ: ಗೋಕಾಕ– ಯರಗಟ್ಟಿ ರಸ್ತೆ ಮಾರ್ಗದ ಮಧ್ಯೆ ಹಿರೇನಂದಿ ಕ್ರಾಸ್ ಹತ್ತಿರ ಗೋಮಾಂಸ ಸಾಗಿಸುತ್ತಿದ್ದ ಗೂಡ್ಸ್ ವಾಹನವು ಭಾನುವಾರ ಪಲ್ಟಿಯಾಗಿದೆ.

ಗೋಕಾಕ ಮಾರ್ಗವಾಗಿ ಹೋಗುತ್ತಿದ್ದ ಗೋ ಮಾಂಸ ಸಾಗಿಸುತ್ತಿದ್ದ ಗೂಡ್ಸ್ ವಾಹನವು ಪಲ್ಟಿಯಾದ ಬಳಿಕ ವಾಹನ ಚಾಲಕ ಗಾಡಿ ನಂಬರ್ ಪ್ಲೇಟ್ಗಳನ್ನು ತೆಗೆದುಹಾಕಿ ಪರಾರಿಯಾಗಿದ್ದಾನೆ. ತಕ್ಷಣ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಕೆ.ಬಿ. ವಾಲಿಕರ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಎಲ್ಲ ಕಸಾಯಿ ಖಾನೆಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ, ಗೋವುಗಳ ಅಕ್ರಮ ಸಾಗಣೆ, ಗೋಮಾಂಸ ಸಾಗಣೆ ಮಾಡುವುದು ಅಪರಾಧವಾಗಿದೆ. ಇದೇ ಕಾರಣಕ್ಕೆ ವಾಹನ ಚಾಲಕ ಅದರ ನಂಬರ್ ಪ್ಲೇಟ್ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.

ವಾಹನ ಪಲ್ಟಿಯಾಗುತ್ತಿದ್ದಂತೆಯೇ ಅಪಾರ ಪ್ರಮಾಣದ ಗೋಮಾಂಸ ರಸ್ತೆಯ ತುಂಬ ಚೆಲ್ಲಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.