ಅವರಿಂದ ₹10 ಲಕ್ಷ, ಕೃತ್ಯಕ್ಕೆ ಬಳಸಿದ 3 ದ್ವಿಚಕ್ರ ವಾಹನ, ಮೊಬೈಲ್ ಸೇರಿದಂತೆ ₹14.30 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
‘ಪರಿಚಯಸ್ಥ ದಿವ್ಯಾ ಮಲಗಿದ್ದಾಗ ನಾನು ಭುಜ ಮುಟ್ಟಿ ಎಬ್ಬಿಸಿದ್ದರ ವಿಡಿಯೊ ಇಟ್ಟುಕೊಂಡು, ನನ್ನನ್ನು ಅಪಹರಣ ಮಾಡಿ ₹25 ಲಕ್ಷಕ್ಕೆ ಬೇಡಿಕೆ ಇರಿಸಿದ್ದರು. ಈ ಪೈಕಿ ₹15 ಲಕ್ಷ ಕೊಟ್ಟಿದ್ದೇನೆ. ಈಗ ₹10 ಲಕ್ಷ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ, ಟಿಳಕವಾಡಿಯ ಮಂಗಳವಾರ ಪೇಟೆಯ ನಿವಾಸಿ ವಿನಾಯಕ ಕುರಡೇಕರ ಅವರು, ಶಹಾಪುರ ಠಾಣೆಯಲ್ಲಿ ಸೆ.24ರಂದು ದೂರು ದಾಖಲಿಸಿದ್ದರು.