ಪೊಲೀಸ್ ಇನ್‌ಸ್ಟೆಕ್ಟರ್‌ಗಳ ವರ್ಗಾವಣೆ
ಬೆಳಗಾವಿ: ಇಲ್ಲಿನ ವಿವಿಧ ಠಾಣೆಗಳ ಪೊಲೀಸ್ ಇನ್‌ಸ್ಪೆಕ್ಟರ್(ಸಿವಿಲ್)ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಸರ್ಕಾರದಿಂದ ಸೋಮವಾರ ಆದೇಶ ಹೊರಡಿಸಲಾಗಿದೆ.
ವಿಶ್ವನಾಥ ದುಂಡಪ್ಪ ಕಬ್ಬೂರಿ ಅವರನ್ನು ಕಂಗ್ರಾಳಿಯ ಕೆಎಸ್‌ಆರ್‌ಪಿ ಪಿಟಿಎಸ್‌ನಿಂದ ಹೆಸ್ಕಾಂ ಚಿಕ್ಕೋಡಿ, ಕರೇಪ್ಪ ಬಿ. ಬನ್ನೆ ಖಾನಾಪುರ ಪಿಟಿಎಸ್‌ನಿಂದ ಹೆಸ್ಕಾಂ ಬೆಳಗಾವಿ, ಚಿಕ್ಕೋಡಿ ಹೆಸ್ಕಾಂನಲ್ಲಿದ್ದ ಸಂದೀಪ ಸಿ. ಮುರುಗೋಡ ಅವರನ್ನು ಖಾನಾಪುರ ಪಿಟಿಎಸ್‌ಗೆ ವರ್ಗಾಯಿಸಲಾಗಿದೆ.
ಡಿಎಸ್‌ಬಿಗೆ ವರ್ಗಾವಣೆ ಆದೇಶದಲ್ಲಿದ್ದ ಶ್ರೀದೇವಿ ಪಾಟೀಲ ಅವರನ್ನು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲೇ ಮುಂದುವರಿಸಲಾಗಿದೆ. ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದ ಸುದರ್ಶನ್ ಕೆ. ಪಟ್ಟಣಕುಡೆ ಅವರನ್ನು ಎಸಿಬಿಯಲ್ಲೇ ಮುಂದುವರಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.