* ಹಿಂದಿ ವಿಷಯದಲ್ಲಿ ಪತ್ರ ಬರೆಯುವುದಕ್ಕೆ ಹೆಚ್ಚಿನ (5) ಅಂಕ ಇದೆ. ಅದನ್ನು ಮೊದಲು ಕಲಿತಿರಬೇಕು.

* ಕಂಠಪಾಠಕ್ಕೆ ಮೂರು ಕವಿತೆಗಳಿವೆ. ಅದರಲ್ಲಿ ಒಂದರ ಭಾವಾರ್ಥ ಕೇಳುತ್ತಾರೆ. ಇನ್ನೊಂದು 3 ಅಂಕದ ಪ್ರಶ್ನೆ ಇರುತ್ತದೆ. ಉಳಿದ ‘ಕೋಶಿಶ್ ಕರ್ನೆ ವಾಲೋಂಕಿ' ಮಹತ್ವದ್ದಾಗಿದೆ. ಇದನ್ನು ಸಂಪೂರ್ಣ ಕಂಠಪಾಠ ಮಾಡುವ ಬದಲಿಗೆ ಕೊನೆಯ ಆರು ಸಾಲುಗಳನ್ನು ಕಲಿತರೆ ಸಾಕು.

* ಪ್ರಬಂಧ: ಪ್ರಚಲಿತ ವಿದ್ಯಮಾನದ ಬಗ್ಗೆ ಪ್ರಶ್ನೆಗಳಿರುತ್ತವೆ. ಇಂಟರ್ನೆಟ್ ಮತ್ತುಮೊಬೈಲ್ನ ಲಾಭ–ಹಾನಿಗಳು, ಜನಸಂಖ್ಯೆ ಸ್ಫೋಟದ ಬಗ್ಗೆ ಇರುತ್ತದೆ. ಈ ವಿಷಯಗಳ ಬಗ್ಗೆ ಗಮನಹರಿಸಬೇಕು.

* ‘ಬಸಂತ್ ಕಿ ಸಚ್ಚಾಯಿ’, ‘ಗೆಲ್ಲೂ’ ಮತ್ತು ‘ಕರ್ನಾಟಕ್ ಸಂಪದ’ – ಈ 3 ಪಾಠಗಳಿಂದ4 ಅಂಕದ ಪ್ರಶ್ನೆ ಬರುವ ಸಾಧ್ಯತೆ ಇರುತ್ತದೆ. ಇವುಗಳನ್ನು ಅಭ್ಯಾಸ ಮಾಡಬೇಕು.

* ತುಳಸಿ ಕೆ ದೋಹೆ – ಈ ಪಾಠಕ್ಕೆ ಸಂಬಂಧಿಸಿದಂತೆ ಭಾವಾರ್ಥ ಬರೆಯಿರಿ ಎಂಬ ಪ್ರಶ್ನೆ (3 ಅಂಕ) ಬರುವ ಸಾಧ್ಯತೆ ಇದೆ. 5ದೋಹೆಗಳಿದ್ದು, ಅವುಗಳಲ್ಲಿ 1 ಹಾಗೂ 4ನೇ ದೋಹೆಗೆ ಹೆಚ್ಚು ಒತ್ತು ಕೊಡಬೇಕು.

* ಅನುವಾದ ವಿಷಯದಲ್ಲಿ (ಹೋದ ವರ್ಷ 4 ಅಂಕಗಳಿಗಿತ್ತು, ಈ ಬಾರಿ 3 ಅಂಕಕ್ಕೆ ಪ್ರಶ್ನೆ ಇರುತ್ತದೆ) ಪ್ಯಾಸೇಜ್ ರೀತಿ 2 ಅಥವಾ 3 ವಾಕ್ಯಗಳನ್ನು ನೀಡುತ್ತಿದ್ದಾರೆ. ತತ್ಸಮ ಪದಗಳೇ ಹೆಚ್ಚಿರುತ್ತವೆ. ತದ್ಭವ ಪದಗಳು ಇರುವುದು ಕಡಿಮೆ.

* ಹೋದ ವರ್ಷ 3 ಅಂಕದ ಪ್ರಶ್ನೆಗಳು 4 ಇದ್ದವು. ಈ ಬಾರಿ 9 ಪ್ರಶ್ನೆಗಳಿರುತ್ತವೆ. ಹೀಗಾಗಿ, ಅರ್ಥವಾಗುವಂತೆ ಬರೆಯುವ ಕೌಶಲ ರೂಢಿಸಿಕೊಳ್ಳಬೇಕು.

* ಹಿಂದಿನ ವರ್ಷ 2 ಅಂಕಗಳದ್ದು 11 ಪ್ರಶ್ನೆಗಳಿದ್ದವು. ಅವುಗಳನ್ನು ಈ ಬಾರಿ 6ಕ್ಕೆ ಕಡಿತಗೊಳಿಸಲಾಗಿದೆ. 1 ಅಂಕದ ಪ್ರಶ್ನೆಗಳನ್ನು6ರಿಂದ 4ಕ್ಕೆ ಇಳಿಸಲಾಗಿದೆ. ಅವುಗಳಲ್ಲಿ, ಪ್ರಶ್ನಾರ್ಥಕ ಪದಗಳನ್ನು ತೆಗೆದು ಉತ್ತರದ ಪದವನ್ನು ಹಾಕಬೇಕು.

* ವ್ಯಾಕರಣ ವಿಭಾಗದಲ್ಲಿ ಯಾವುದೇ ಬದಲಾವಣೆ ಇಲ್ಲ. 8 ಪ್ರಶ್ನೆಗಳಿಗೂ ಬಹು ಆಯ್ಕೆಗಳಿರುತ್ತವೆ. ಉಳಿದಂತೆ ಯಾವ ವಿಭಾಗದಲ್ಲೂ ಬಹು ಆಯ್ಕೆಗಳಿರುವುದಿಲ್ಲ.

* ಹೊಂದಿಸಿ ಬರೆಯಿರಿ ಎನ್ನುವ ಪ್ರಶ್ನೆ ಈ ಬಾರಿ ಇರುವುದಿಲ್ಲ. ಹೋಲಿಸಿ ಬರೆಯಿರಿ ಪ್ರಶ್ನೆ ಇರುತ್ತದೆ.

– ಡಾ.ಸುನೀಲ ಪರೀಟ, ಹಿಂದಿ ವಿಷಯ ಸಂಪನ್ಮೂಲ ವ್ಯಕ್ತಿ, ಸರ್ಕಾರಿ ಪ್ರೌಢಶಾಲೆ, ಲಕ್ಕುಂಡಿ, ಬೈಲಹೊಂಗಲ ತಾಲ್ಲೂಕು, ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.