ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಿಗಳ ಬಿಡುಗಡೆ 23ರಂದು

Last Updated 20 ಜನವರಿ 2021, 11:30 IST
ಅಕ್ಷರ ಗಾತ್ರ

ಬೆಳಗಾವಿ: ಸಪ್ನ ಬುಕ್ ಹೌಸ್‌ ತನ್ನ 45ನೇ ವಾರ್ಷಿಕೋತ್ಸವ ಸಂಭ್ರಮ ನಿಮಿತ್ತ 50 ಕನ್ನಡ ಪುಸ್ತಕಗಳನ್ನು ಬಿಡುಗಡೆ ಮಾಡುತ್ತಿದೆ. ಇಲ್ಲಿನ ಲೇಖಕರಾದ ಚಂದ್ರಕಾಂತ ಪೋಕಳೆ ಹಾಗೂ ಡಿ.ಎಸ್. ಚೌಗಲೆ ಅವರ ಕೃತಿಗಳ ಬಿಡುಗಡೆ ಕಾರ್ಯಕ್ರಮ ಜ. 23ರಂದು ಬೆಳಿಗ್ಗೆ 11.30ಕ್ಕೆ ನಗರದ ಕೃಷ್ಣದೇವರಾಯ ವೃತ್ತ (ಕೊಲ್ಲಾಪುರ ವೃತ್ತ) ಸಮೀಪದ ಸಪ್ನ ಬುಕ್ ಹೌಸ್‌ ಬೆಳಗಾವಿ ಶಾಖೆಯಲ್ಲಿ ನಡೆಯಲಿದೆ.

ಪೋಕಳೆ ಅವರ ಅನುವಾದಿತ ಕಾದಂಬರಿ ‘ನದೀಷ್ಟ’ (ಮೂಲ ಮರಾಠಿ: ಮನೋಜ ಬೋರಗಾಂವಕರ) ಮತ್ತು ಡಿ.ಎಸ್. ಚೌಗಲೆ ಅವರ ಕಥಾಸಂಕಲನ ‘ಸೀಮಿಗೊಂದ ಅಟಾಟಿ’ ಹಾಗೂ ಎಸ್.ಎಸ್. ಅಂಗಡಿ ಸಂಪಾದಕತ್ವದ ‘ಹರಿಹರನ ಸರಳ ಬರವರಜನದೇವರ ರಗಳೆ’ ಸೇರಿದಂತೆ 50 ಪುಸ್ತಕಗಳನ್ನು ಸಾಹಿತಿ ಸರಜೂ ಕಾಟ್ಕರ್ ಬಿಡುಗಡೆ ಮಾಡುವರು. ‘ನದೀಷ್ಟ’ ಹಾಗೂ ‘ಸೀಮಿಗೊಂದ ಅಟಾಟಿ’ ಪುಸ್ತಕಗಳ ಪರಿಚಯವನ್ನು ರಂಗಕರ್ಮಿ ದಿಲಾವರ ರಾಮದುರ್ಗ ಮಾಡುತ್ತಾರೆ. ಲೇಖಕ ಡಿ.ಎಸ್. ಚೌಗಲೆ ಉಪಸ್ಥಿತರಿರುತ್ತಾರೆ ಎಂದು ವ್ಯವಸ್ಥಾಪಕ ರಘು ಎಂ.ವಿ. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT