ಸೋಮವಾರ, ಸೆಪ್ಟೆಂಬರ್ 20, 2021
20 °C

ವಿಡಿಯೊ ನೋಡಿ: ಪ್ರಾಣದ ಹಂಗು ತೊರೆದು ಎಮ್ಮೆ ರಕ್ಷಿಸಿದ ಯುವಕ!

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಅಥಣಿ (ಬೆಳಗಾವಿ ಜಿಲ್ಲೆ):  ಕೃಷ್ಣಾ ನದಿ ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಎಮ್ಮೆಯನ್ನು ಯುವಕರೊಬ್ಬರು ಪ್ರಾಣದ ಹಂಗು ತೊರೆದು ಭಾನುವಾರ ರಕ್ಷಿಸಿದರು.

ಸಮೀಪದ ಸತ್ತಿ ಗ್ರಾಮದ ಮನೋಜ ಗಂಗಪ್ಪನವರ ಅವರಿಗೆ ಸೇರಿದ ಎಮ್ಮೆಯನ್ನು ಕಾಳಜಿ ಕೇಂದ್ರಕ್ಕೆ ಕರೆತರುವಾಗ ದೊಡವಾಡ ರಸ್ತೆಯ ಬಳಿ  ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಯಿತು. ಅದೇ ಗ್ರಾಮದ ಆನಂದ ಚಿನಗುಂಡಿ ರಕ್ಷಣೆಗೆ ಮುಂದಾಗಿ, ಗ್ರಾಮದ ಕೆಲವರ ಸಹಾಯದಿಂದ ಹಗ್ಗ ಪಡೆದು ಎಮ್ಮೆಗೆ ಕಟ್ಟಿದ ಹಗ್ಗಕ್ಕೆ ಬಿಗಿದು ತಾನೂ ಹಿಡಿದುಕೊಂಡು ನೀರಿನಿಂದ ಮೇಲೆ ಬಂದರು. 

ಮಲ್ಲು ಲೊಕೊಂಡೆ ಅವರ ಎಮ್ಮೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು