ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಮ್ಮನ ಕಿತ್ತೂರು | ಬಸ್ ಪಲ್ಟಿ: 10 ಜನರಿಗೆ ಗಾಯ

Published 16 ಏಪ್ರಿಲ್ 2024, 15:42 IST
Last Updated 16 ಏಪ್ರಿಲ್ 2024, 15:42 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಹುಬ್ಬಳ್ಳಿಯಿಂದ ಬೆಳಗಾವಿಗೆ ಹೊರಟಿದ್ದ ಸಾರಿಗೆ ಸಂಸ್ಥೆಯ ತಡೆರಹಿತ ರಾಜಹಂಸ ಬಸ್ ತಾಲ್ಲೂಕಿನ ತಿಮ್ಮಾಪುರ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು 10 ಪ್ರಯಾಣಿಕರಿಗೆ ಗಾಯಗಳಾಗಿವೆ.

ಹೆದ್ದಾರಿ ಬದಿಗಿರುವ ಕಬ್ಬಿಣದ ತಡೆ ಸರಳುಗಳನ್ನು ಕಿತ್ತುಕೊಂಡು ಸರ್ವೀಸ್ ರಸ್ತೆಗೆ ಬಂದು ಬಸ್ ಬಿದ್ದಿದೆ. ಭಾರಿ ಸಪ್ಪಳವಾಗಿದ್ದರಿಂದ ತಿಮ್ಮಾಪುರ ಗ್ರಾಮಸ್ಥರು ಧಾವಿಸಿ ಬಂದು ವಾಹನದಲ್ಲಿ ಸಿಕ್ಕಿ ಬಿದ್ದಿದ್ದ ಪ್ರಯಾಣಿಕರನ್ನು ಹೊರತೆಗೆಯುವಲ್ಲಿ ನೆರವಾದರು.

ಗಾಯಾಳುಗಳನ್ನು ಇಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಸಿಪಿಐ ಮಲಕಾಜಪ್ಪ ಡಪ್ಪೀನ್, ಎಸ್ಐ ಪ್ರವೀಣ ಗಂಗೋಳ ಸ್ಥಳ ಪರಿಶೀಲನೆ ನಡೆಸಿದರು. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT