ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಮ್ಮನ ಕಿತ್ತೂರು: ಕಾರ್‌ ಅಡ್ಡಗಟ್ಟಿ ₹10 ಲಕ್ಷ ಕಳವು

Published 6 ಜುಲೈ 2024, 16:10 IST
Last Updated 6 ಜುಲೈ 2024, 16:10 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಹಿರೇಹಳ್ಳ ಬಳಿ ಕಾರ್‌ ಅಡ್ಡಗಟ್ಟಿ ₹10 ಲಕ್ಷ ಕಸಿದ ಕಳ್ಳರು ಪರಾರಿಯಾಗಿದ್ದಾರೆ.

ಬೆಳಗಾವಿ ಶಾಸ್ತ್ರೀನಗರದ ಹಾರ್ಡ್‌ವೇರ್ ಅಂಗಡಿ ಮಾಲೀಕ ಅಮಿತ್ ಅಶೋಕ ಪೇರಿವಾಲ ಅವರು ಶಿವಮೊಗ್ಗದ ಮಿತ್ರರಿಗೆ ₹10 ಲಕ್ಷ ಕೊಡಲು, ತಮ್ಮ ಅಂಗಡಿಯ ಕೆಲಸಗಾರ ಚಂದನಾಥ ರಾಮೇಶ್ವರ ಸಿದ್ ಹಾಗೂ ಸುನೀಲ ರಾಜಕುಮಾರ ಪ್ರಜಾಪತ್ ಅವರನ್ನು ಕಳುಹಿಸಿದ್ದರು. ಅವರು ಸಾಗುತ್ತಿದ್ದ ಕಾರ್‌ ಅಡ್ಡಗಟ್ಟಿದ ಕಳ್ಳರು ಹಣ ಕಸಿದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ ಎಸ್.ಎನ್., ಡಿವೈಎಸ್‌ಪಿ ರವಿ ನಾಯಕ, ಪಿಎಸ್ಐ ಪ್ರವೀಣ ಗಂಗೊಳ ಸ್ಥಳ ಪರಿಶೀಲನೆ ನಡೆಸಿದರು. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT