ಬುಧವಾರ, ಜೂನ್ 29, 2022
24 °C

ಸಂಕೇಶ್ವರದಲ್ಲಿ ಪೌರಸನ್ಮಾನ ಸ್ವೀಕರಿಸಿದ್ದ ಚೆನ್ನವೀರ ಕಣವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಂಕೇಶ್ವರ: ಖ್ಯಾತ ಕವಿ ಡಾ.ಚೆನ್ನವೀರ ಕಣವಿ ಅವರು ಪಟ್ಟಣದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.

ಅವರ ಸಾಹಿತ್ಯ ಕುರಿತು ವಿಚಾರಸಂಕಿರಣ ಮತ್ತು ಪೌರಸನ್ಮಾನ ಕಾರ್ಯಕ್ರಮವನ್ನು ಇಲ್ಲಿನ ದುರುಂಡೀಶ್ವರ ಮಠದಲ್ಲಿ ವೀರಶೈವ ಸಮಾಜದದಿಂದ 1993ರ ಆ.29ರಂದು ಆಯೋಜಿಸಲಾಗಿತ್ತು. ವಿದ್ವಾಂಸರು ಪಾಲ್ಗೊಂಡು ವಿಷಯ ಮಂಡಿಸಿದ್ದರು. ಅವನ್ನು ನಿಡಸೋಸಿಯ ದುರುದುಂಡೀಶ್ವರ ಮಠದಿಂದ ಗ್ರಂಥ ರೂಪದಲ್ಲಿ ಪ್ರಕಟಿಸಲಾಗಿದೆ ಎಂದು ಆ ಕಾರ್ಯಕ್ರಮದ ರೂಪಾರಿಗಳಾಗಿದ್ದ  ಡಾ.ಗುರುಪಾದ ಮರಿಗುದ್ದಿ ಹಾಗೂ ಪ್ರೊ.ಎಲ್.ವಿ. ಪಾಟೀಲ ನೆನೆದರು.

ಶಿವರುದ್ರೇಶ್ವರ ಕಲಾ ಕಾಲೇಜಿನಲ್ಲಿ ನಡೆದಿದ್ದ ಸಾಹಿತ್ಯ ಕಾರ್ಯಕ್ರಮದಲ್ಲಿ ಕವಿತೆಗಳನ್ನು ಓದಿದ್ದರು. ಬಳಿಕ ನಿಡಸೋಸಿ ಮಠದಲ್ಲಿ ಜರುಗಿದ್ದ ದಾಸೋಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಣವಿ ಅವರ ಪತ್ನಿ ಶಾಂತಾದೇವಿ ಅವರು ಸಮೀಪದ ಯಮಕನಮರಡಿಯವರು. ನಾನು ಹುಕ್ಕೇರಿ ತಾಲ್ಲೂಕಿನ ಅಳಿಯ ಎಂದು ಹೇಳಿಕೊಳ್ಳುತ್ತಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು