ಜೋಡಿ ರೈಲು ಮಾರ್ಗ ಪರಿಶೀಲನೆ

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ರಸ್ತೆಯಿಂದ ರಾಯಬಾಗ ರೈಲು ನಿಲ್ದಾಣದವರೆಗೆ (13.94 ಕಿ.ಮೀ.) ಪೂರ್ಣಗೊಂಡಿರುವ ಜೋಡಿ ಮಾರ್ಗವನ್ನು ರೈಲ್ವೆ ಇಲಾಖೆ ದಕ್ಷಿಣ ವೃತ್ತದ ರೈಲ್ವೆ ಸುರಕ್ಷತಾ ಆಯುಕ್ತ (ಸಿಆರ್‌ಎಸ್) ಎ.ಕೆ. ರಾಯ್ ಮಂಗಳವಾರ ಪರಿಶೀಲಿಸಿ, ವೇಗದ ಟ್ರಯಲ್ ಕೂಡ ನಡೆಸಿದರು.
2015–16ನೇ ಸಾಲಿನಲ್ಲಿ ಮಂಜೂರಾಗಿರುವ ₹ 1191 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಲೋಂಡಾ–ಮೀರಜ್ ನಡುವಣ ಜೋಡಿ ರೈಲು ಮಾರ್ಗದ ಕಾಮಗಾರಿ ಭಾಗವಾಗಿ ಚಿಕ್ಕೋಡಿ ರಸ್ತೆ–ರಾಯಬಾಗದವರೆಗೆ ಮಾರ್ಗ ನಿರ್ಮಿಸಲಾಗಿದೆ. ಅಧಿಕಾರಿಗಳು ಮೊದಲು ಮೋಟಾರ್ ಟ್ರಾಲಿ ಮೂಲಕ ಪರಿಶೀಲಿಸಿದರು. ಬಳಿಕ ಗಂಟೆಗೆ 130 ಕಿ.ಮೀ. ವೇಗದಲ್ಲಿ ಸ್ಪೀಡ್ ಟ್ರಯಲ್ ನಡೆಸಿದರು. ಈ ಪ್ರಕ್ರಿಯೆ ಸುಗಮವಾಗಿ ನಡೆಯಿತು.
ರಾಯಬಾಗ ನಿಲ್ದಾಣದ ಕಟ್ಟಡ ಹಾಗೂ ಪ್ರಯಾಣಿಕರಿಗೆ ಸೌಲಭ್ಯ ವ್ಯವಸ್ಥೆಯನ್ನೂ ಪರಿಶೀಲಿಸಿದರು.
ಉಪ ಸಿಆರ್‌ಎಸ್ ಶ್ರೀನಿವಾಸ್, ಸಿಎಒ ಕೆ.ಸಿ. ಸ್ವಾಮಿ, ಎಡಿಆರ್‌ಎಂ ವಿಶ್ವಾಸ್‌ಕುಮಾರ್ ಇದ್ದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.