ಬೆಳಗಾವಿ: ಗೋಕಾಕದಲ್ಲಿ ರಾಹುಲ್, ಪ್ರಿಯಾಂಕಾ ನೇತೃತ್ವದಲ್ಲಿ ಪ್ರತಿಭಟನೆ

ಬೆಳಗಾವಿ: ಕೇಂದ್ರ, ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಹಾಗೂ ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಗೋಕಾಕದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಕ್ಕಳಾದ ರಾಹುಲ್ ಮತ್ತು ಪ್ರಿಯಾಂಕಾ ಜಾರಕಿಹೊಳಿ ನೇತೃತ್ವದಲ್ಲಿ ಕಾರ್ಯಕರ್ತರು ಬುಧವಾರ ಸೈಕಲ್ ಜಾಥಾ ನಡೆಸಿದರು.
ಬ್ಯಾಳಿ ಕಾಟಾದಿಂದ ಆರಂಭವಾದ ಜಾಥಾ ವಿವಿಧ ರಸ್ತೆಗಳಲ್ಲಿ ಸಂಚರಿಸಿತು. ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ಬಸವೇಶ್ವರ ವೃತ್ತದಲ್ಲಿ ಮುಕ್ತಾಯವಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದರು. ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಬೇಕು. ಇಲ್ಲದಿದ್ದರೆ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸಿದರು.
ವಿವೇಕ ಜತ್ತಿ, ರಾಹುಲ್ ಬಡೆಸಗೋಳ, ರೆಹಮಾನ್ ಮೊಕಾಶಿ, ಪ್ರವೀಣ ಗುಡ್ಡಾಕಾಯಿ, ಬಸವರಾಜ ಸಾಯಣ್ಣವರ, ಸುನೀಲ ಅಂಕದವರ, ಕಲ್ಪನಾ ಕರೆನ್ನವರ, ಯಶೋಧಾ ಬಿರಡಿ, ಶಿವು ಕಿಲಾರಿ, ಬಸವಣ್ಣೆಪ್ಪ ಪರುಶೆಟ್ಟಿ, ಇಮ್ರಾನ್ ತಪಕೀರ, ರಾಜು ಮೇದಾರ, ಪ್ರಕಾಶ ಬಸಾಪುರೆ, ಮಾರುತಿ ಗುಟಗುದ್ದಿ, ಜುಬೇರ ಮಿರ್ಜಾನಾಯ್ಕ ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.