ಕೃಷಿ ಹೊಂಡಕ್ಕೆ ಕ್ಷೇತ್ರ ಬದು ನಿರ್ಮಾಣ, ತಂತಿ ಬೇಲಿ, ಡಿಸೈಲ್ ಇಂಜಿನ್, ತಾಡಪಾಲ್, ತುಂತುರು ನೀರಾವರಿ ಘಟಕಗಳನ್ನು ಪಡೆಯಲು ಸೌಲಭ್ಯವಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಶೇ 90ರಷ್ಟು, ಸಾಮಾನ್ಯ ರೈತರಿಗೆ ಶೇ 80ರಷ್ಟು ಸಹಾಯಧನವಿದೆ. ಆಸಕ್ತರು ರೈತ ಸಂಪರ್ಕ ಕೇಂದ್ರಗಳಲ್ಲಿ ಸೆ.30ರೊಳಗಾಗಿ ಅರ್ಜಿ ಸಲ್ಲಿಸಬಹುದು/ ಈ ಹಿಂದಿನ ಫಲಾನುಭವಿಗಳು ಮತ್ತೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.