ಗುರುವಾರ , ಮೇ 6, 2021
23 °C

ಮತ ಎಣಿಕೆ: ವಾಹನ ನಿಲುಗಡೆಗೆ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿನ ಆರ್‌ಪಿಡಿ ಕಾಲೇಜಿನಲ್ಲಿ ಭಾನುವಾರ ನಡೆಯುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಕಾರ್ಯಕ್ಕೆ ಬರುವವರ ವಾಹನಗಳ ಸಂಚಾರ ಹಾಗೂ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್‌ ತಿಳಿಸಿದ್ದಾರೆ.

* ಅಭ್ಯರ್ಥಿಗಳು: ಕಾಲೇಜಿನ 1ನೇ ಗೇಟ್‌ ಮೂಲಕ ಪ್ರವೇಶಿಸಿ ಆಫೀಸ್ ಕಟ್ಟಡದ ಸಮೀಪದ ಮೈದಾನದಲ್ಲಿ ನಿಲ್ಲಿಸಬೇಕು.

* ಮಾಧ್ಯಮ ಪ್ರತಿನಿಧಿಗಳು: ಭಾಗ್ಯ ನಗರ 2ನೇ ಕ್ರಾಸ್– ಲೋಕಮಾನ್ಯ ಮಲ್ಟಿಪರ್ಪಸ್‌ ಕೋ-ಆಪ್‌ ಸೊಸೈಟಿ ದಾಟಿ ಎಡತಿರುವು ಪಡೆದು ಮಾವಿನ ತೋಟದ ಗೇಟ್‌ ಮೂಲಕ ಪ್ರವೇಶಿಸಿ, ನಿಗದಿತ ಸ್ಥಳದಲ್ಲಿ ನಿಲ್ಲಿಸಬೇಕು.

* ಏಜೆಂಟರು ಮತ್ತು ಎಣಿಕೆ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿ, ಸಿಬ್ಬಂದಿ: ಭಾಗ್ಯ ನಗರ 2ನೇ ಕ್ರಾಸ್– ಲೋಕಮಾನ್ಯ ಮಲ್ಟಿಪರ್ಪಸ್‌ ಕೋ-ಆಪ್‌ ಸೊಸೈಟಿ ದಾಟಿ ಎಡತಿರುವು ಪಡೆದು ಮಾವಿನ ತೋಟದ ಗೇಟ್‌ ಮೂಲಕ ಪ್ರವೇಶಿಸಿ, ಮೈದಾನದಲ್ಲಿ ವಾಹನಗಳನ್ನು ನಿಲ್ಲಿಸಬೇಕು.

* ಗೋವಾವೇಸ್ ವೃತ್ತದಿಂದ ಬಿಗ್ ಬಜಾರ್‌ ವೃತ್ತದವರೆಗಿನ ಅಟಲ್‌ ಬಿಹಾರಿ ವಾಜಪೇಯಿ ರಸ್ತೆಯಲ್ಲಿ ಎರಡೂ ಬದಿಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.

* ಶಹಾಪುರ ಹಾಗೂ ಗೋವಾವೇಸ್ ವೃತ್ತದಿಂದ ಆರ್‌ಪಿಡಿ ಕಾಲೇಜು ಮಾರ್ಗವಾಗಿ ಖಾನಾಪುರ, ಪೀರನವಾಡಿ ಕಡೆಗೆ ಸಂಚರಿಸುವ ಎಲ್ಲ ಮಾದರಿ ವಾಹಗಳು ಗೋವಾವೇಸ್ ಈಜುಕೊಳ್ಳ ರಸ್ತೆಯಲ್ಲಿ ಬಲ ತಿರುವು ಪಡೆದು 1ನೇ ರೈಲ್ವೆ ಗೇಟ್‌ನಿಂದ ಕಾಂಗ್ರೆಸ್‌ ರಸ್ತೆ ಸೇರಬೇಕು.

* ಮಹಾರಾಷ್ಟ್ರದಿಂದ ಗೋವಾಕ್ಕೆ ಹೋಗುವವರು ಹಿಂಡಾಲ್ಕೊ ಕೆಳಸೇತುವೆ–ಬಾಕ್ಸೈಟ್‌ ರಸ್ತೆ ಮೂಲಕ ಹಿಂಡಲಗಾ ಅರಣ್ಯ ಘಟಕ ನಾಕಾ, ಹಿಂಡಲಗಾ ಗಣೇಶ ಮಂದಿರ, ಗಾಂಧಿ ವೃತ್ತ, ಗ್ಲೋಬ್ ವೃತ್ತ– ಗೋಗಟೆ ವೃತ್ತದ ಮೂಲಕ ಕಾಂಗ್ರೆಸ್‌ ರಸ್ತೆ ಸೇರಿ ಸಾಗಬೇಕು.

* ಗೋವಾ ಕಡೆಯಿಂದ ಮಹಾರಾಷ್ಟ್ರ ಕಡೆಗೆ ಹೋಗಲು 3ನೇ ರೈಲ್ವೆ ಗೇಟ್ ಹತ್ತಿರ ಎಡತಿರುವು ಪಡೆದು ಕಾಂಗ್ರೆಸ್‌ ರಸ್ತೆ– ಗೋಗಟೆ ವೃತ್ತ– ಗಾಂಧಿ ವೃತ್ತ– ಹಿಂಡಲಗಾ ಗಣೇಶ ಮಂದಿರ, ಹಿಂಡಲಗಾ ಅರಣ್ಯ ಘಟಕ ನಾಕಾ, ಬಾಕ್ಸೈಟ್‌ ರಸ್ತೆ ಮೂಲಕ ಎನ್‌ಎಚ್‌–4 ಸೇರಬೇಕು.

* ಕೇಂದ್ರಕ್ಕೆ ಬರುವವರು ಮೊಬೈಲ್ ಫೋನ್‌, ಗುಟ್ಕಾ ಪಾಕೆಟ್, ಇಂಕ್‌ಪೆನ್, ಕ್ಯಾಮೆರಾ, ಬೆಂಕಿಪೊಟ್ಟಣ, ಸಿಗರೇಟ್, ಲೈಟರ್ ಮೊದಲಾದ ನಿಷೇಧಿತ ವಸ್ತುಗಳನ್ನು ತರುವಂತಿಲ್ಲ.

* 48 ಗಂಟೆಗಿಂತ ಹಳೆಯದಲ್ಲದ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ.

* ಗುರುತಿನ ಚೀಟಿ/ಪಾಸ್ ತರಬೇಕು. ಕೋವಿಡ್–19 ನಿಯಮಾವಳಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಸೂಚಿಸಿದ ಮಾರ್ಗದಲ್ಲೇ ಸಂಚರಿಸಬೇಕು.

* ಮತ ಎಣಿಕೆ ಸಂದರ್ಭದಲ್ಲಿ ಕೇಂದ್ರದ ಸುತ್ತಮುತ್ತ ಜನರು ಜಮಾವಣೆ ಆಗುವುದನ್ನು ನಿಷೇಧಿಸಲಾಗಿದೆ. ವಿಜಯೋತ್ಸವಕ್ಕೆ ಅವಕಾಶವಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು