ಶುಕ್ರವಾರ, ಜೂನ್ 25, 2021
21 °C

ಬ್ಯಾಂಕ್‌ನಿಂದ ಹಣ ಡ್ರಾ ಮಾಡಿದ ಸೋಂಕಿತನ ವಿರುದ್ಧ ದೂರು ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಪ್ಪಾಣಿ: ಕೋವಿಡ್-19 ದೃಢಪಟ್ಟು ಮನೆಯಲ್ಲಿ ಕ್ವಾರಂಟೈನ್ ಆಗಿದ್ದ ವ್ಯಕ್ತಿ ಬ್ಯಾಂಕ್‌ಗೆ ಹೋಗಿ ಬಂದಿದ್ದರ ವಿರುದ್ಧ ನಿಯಮ ಉಲ್ಲಂಘನೆ ಆರೋಪದ ಮೇಲೆ ಸ್ಥಳೀಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಆಡಿ ಗ್ರಾಮದ ಯುವಕನ ವಿರುದ್ಧ ಪಿಡಿಒ ಶಿವಾನಂದ ಧನಪಾಲ ತೇಲಿ ಅವರು ವಿಪತ್ತು ನಿರ್ವಹಣಾ ಕಾಯ್ದೆಯಡಿ ಶನಿವಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೇ 8ರಂದು ಆರೋಗ್ಯ ಇಲಾಖೆಯು ಇವರಿಗೆ ಕೋವಿಡ್‌ ದೃಢಪಟ್ಟಿರುವುದನ್ನು ವರದಿ ಮಾಡಿತ್ತು. ಅವರಿಗೆ ಮನೆಯಲ್ಲಿ ಕ್ವಾರಂಟೈನ್ ಮಾಡಿ, ಹೊರಬರದಂತೆ ತಿಳಿಸಿದ್ದರು. ಆದರೆ, ಅವರು ಮೇ15ರಂದು ಗ್ರಾಮದ ಬ್ಯಾಂಕ್‌ಗೆ ಹೋಗಿ ಉಳಿತಾಯ ಖಾತೆಯಲ್ಲಿದ್ದ ಹಣವನ್ನು ತೆಗೆದಿದ್ದಾರೆ. ಈ ಮೂಲಕ ನಿರ್ಲಕ್ಷ್ಯ ಮಾಡಿ, ರೋಗ ಹರಡುವಂತೆ ವರ್ತಿಸಿದ್ದಾರೆ ಎಂದು ಪಿಡಿಒ ದೂರು ದಾಖಲಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು