ಬೆಳಗಾವಿ: ಇಲ್ಲಿನ ಕೆಎಲ್‌ಎಸ್ ಗೋಗಟೆ ತಾಂತ್ರಿಕ ಕಾಲೇಜಿನಲ್ಲಿ ‘ಕೋವಿಡ್-19 ಲಸಿಕಾ ಅಭಿಯಾನ’ವನ್ನು ಗುರುವಾರ ಯಶಸ್ವಿಯಾಗಿ ನಡೆಸಲಾಯಿತು.

ಕಾಲೇಜಿನ ಕೋವಿಡ್ ಕೋಶ ಮತ್ತು ಎನ್ಎಸ್ಎಸ್ ಜಂಟಿಯಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿತ್ತು. 45 ವರ್ಷಕ್ಕಿಂತ ಹೆಚ್ಚು ವಯಸ್ಸಿನ 80 ಸಿಬ್ಬಂದಿಗೆ ಲಸಿಕೆ ನೀಡಲಾಯಿತು. ಲಸಿಕೆ ಹಾಕಿದ ಸಿಬ್ಬಂದಿಯಿಂದ ಆರ್‌ಟಿಪಿಸಿಆರ್ ಪರೀಕ್ಷೆಗಳ ಮಾದರಿಗಳನ್ನೂ ಸಂಗ್ರಹಿಸಲಾಯಿತು.

ಇ ಅಂಡ್ ಸಿ ವಿಭಾಗದ ಅಧ್ಯಾಪಕ ಸದಸ್ಯ ಮತ್ತು ಕೆಎಲ್ಎಸ್ ಜಿಐಟಿಯ ಕೋವಿಡ್-19 ಕೋಶದ ಸದಸ್ಯ ಪ್ರೊ.ಸಾಗರ ಸಂತಾಜಿ ಈ ಶಿಬಿರ ಸಂಘಟಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಪ್ರಾಂಶುಪಾಲ ಡಾ.ಜಯಂತ. ಕೆ. ಕಿತ್ತೂರ ಮತ್ತು ಡೀನ್ (ಆಡಳಿತ) ಪ್ರೊ.ಡಿ.ಎ. ಕುಲಕರ್ಣಿ, ಜಿಐಟಿಯ ಕೋವಿಡ್ ಸೆಲ್ ಸಂಯೋಜಕ ಡಾ.ಎಂ.ಎನ್. ನಡಕಟ್ಟಿ ಮತ್ತು ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ವಿ.ವಿ. ರಾಜಪೂತ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.