ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಮಾರ್ಗಸೂಚಿ ಮಾಡಿದವರಿಂದಲೆ ಉಲ್ಲಂಘನೆ

ಬಿಜೆಪಿ ವಿರುದ್ಧ ಸತೀಶ ಜಾರಕಿಹೊಳಿ ವಾಗ್ದಾಳಿ
Last Updated 15 ಜನವರಿ 2021, 14:31 IST
ಅಕ್ಷರ ಗಾತ್ರ

ಬೆಳಗಾವಿ: ‘ಕೋವಿಡ್–19 ಮಾರ್ಗಸೂಚಿ ಮಾಡಿದವರೆ ಅದನ್ನು ಉಲ್ಲಂಘಿಸುತ್ತಿದ್ದಾರೆ. ಇಲ್ಲಿ ಸಹಸ್ರಾರು ಕಾರ್ಯಕರ್ತರನ್ನು ಸೇರಿಸಿ ಸಮಾವೇಶ ನಡೆಸುವ ನಿಯಮ ಗಾಳಿಗೆ ತೂರುತ್ತಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಶಾಸಕ ಸತೀಶ ಜಾರಕಿಹೊಳಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಇಲ್ಲಿನ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಜನರಿಗೊಂದು ನಿಯಮ, ಬಿಜೆಪಿಯವರಿಗೊಂದು ನಿಯಮ ಇಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮಾವೇಶಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ 3–4 ಲಕ್ಷ ಜನ ಸೇರಿಸುವುದಾಗಿ ಹೇಳುತ್ತಿದ್ದಾರೆ. ಅಲ್ಲಿ ಗರಿಷ್ಠ 50ಸಾವಿರ ಮಂದಿ ಸೇರಿಸಬಹುದು. ಇದೂ ಕೋವಿಡ್ ನಿಯಮ ಉಲ್ಲಂಘಿಸಿದಂತಾಗುತ್ತದೆ. ಸರ್ಕಾರವು ಮಾರ್ಗಸೂಚಿ ಹಿಂಪಡೆಯಬೇಕು ಅಥವಾ ಸಮಾವೇಶ ರದ್ದುಪಡಿಸಬೇಕು’ ಎಂದು ಒತ್ತಾಯಿಸಿದರು.

‘ಅವರೇ ತಂದಿರುವ ಹಲವು ನಿಯಮಗಳನ್ನು ಬಹಳಷ್ಟು ಬಾರಿ ಮುರಿದಿದ್ದಾರೆ. ಜನರು ಪಾಠ ಕಲಿಸುವವರೆಗೂ ಹೀಗೆಯೇ ಇರುತ್ತಾರೆ’ ಎಂದರು.

‘ಬಹಳಷ್ಟು ಜನರು ಸೇರುತ್ತಾರೆ ಎಂದು ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಸಾರ್ವಜನಿಕ ದರ್ಶನ ನಿಷೇಧಿಸಲಾಗಿದೆ. ಜಾತ್ರೆ ಸರಳವಾಗಿ ನಡೆಸಲಾಗಿದೆ. ಹೀಗಿರುವಾಗ ಇಲ್ಲಿ ಸಮಾವೇಶ ಮಾಡುತ್ತಿದ್ದಾರೆ. ಈ ಬಗ್ಗೆ‌ ನ್ಯಾಯಾಲಯದಲ್ಲಿ ಪ್ರಶ್ನಿಸುವುದಿಲ್ಲ. ಇದನ್ನು ಜನತಾ ನ್ಯಾಯಲಯಕ್ಕೆ ಬಿಡುತ್ತೇವೆ.‌ ಒಂದು ವೇಳೆ, ಅಗತ್ಯ ಬಿದ್ದರೆ ಕಾನೂನುಬದ್ಧ ಹೋರಾಟವನ್ನೂ ಮಾಡುತ್ತೇವೆ’ ಎಂದು ತಿಳಿಸಿದರು.

ಕಾಂಗ್ರೆಸ್ ತೊರೆದು ಹೋದವರು ಮರಳುವರೇ ಎಂಬ ಪ್ರಶ್ನೆಗೆ, ‘ಸದ್ಯ ಅಂತಹ ವಾತಾವರಣವಿಲ್ಲ. 2023ರ ಚುನಾವಣೆ ಬಂದಾಗ ಎಲ್ಲವೂ ಗೊತ್ತಾಗುತ್ತದೆ. ವಲಸೆ ನಡೆಯುತ್ತದೆ. ಕಾದು ನೋಡೋಣ’ ಎಂದರು.

‘2023ರ ಚುನಾವಣೆಯಲ್ಲಿ ನಾನು ಮುಖ್ಯಮಂತ್ರಿ ಅಭ್ಯರ್ಥಿ ನಾನಲ್ಲ. ಆರಾಮವಾಗಿ ಜನರ ಮಧ್ಯೆ ಓಡಾಡಿಕೊಂಡು ಇರುತ್ತೇನೆ. ಆ ನಂತರ ನಮ್ಮ ಸರದಿ ಬರಲಿದೆ’ ಎಂದು ಪ್ರತಿಕ್ರಿಯಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT