ಬೆಳಗಾವಿ: ಕೋವಿಡ್–19 ಹಿನ್ನೆಲೆಯಲ್ಲಿ ಇಲ್ಲಿನ ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಿಂದ ‘ಸನ್ಮಿತ್ರ– ಕೋವಿಡ್ ಆರೋಗ್ಯ ಸಹಾಯವಾಣಿ’ ಸ್ಥಾಪಿಸಲಾಗಿದೆ.

‘ಸೋಂಕಿತರು ಹಾಗೂ ಇತರ ರೋಗಿಗಳು ಪ್ರಯೋಜನ ಪಡೆದುಕೊಳ್ಳಬಹುದು. ಆಸ್ಪತ್ರೆಯ ವೈದ್ಯರು ಸರದಿ ಪ್ರಕಾರ ದಿನಕ್ಕೆ ಒಬ್ಬರಂತೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುವರು. ಪ್ರಶ್ನೆಗಳಿಗೆ ಇ–ಮೇಲ್, ವಾಟ್ಸ್ ಆ್ಯಪ್ ಅಥವಾ ದೂರವಾಣಿ ಮೂಲಕ ಉತ್ತರಿಸುವರು. ಈ ಸೌಲಭ್ಯವು ಸೆ. 28ರಿಂದ ಡಿ. 31ರವರೆಗೆ ಭಾನುವಾರ ಹಾಗೂ ಸಾರ್ವತ್ರಿಕ ರಜೆಗಳನ್ನು ಹೊರತುಪಡಿಸಿ ಇತರ ದಿನಗಳಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಲಭ್ಯವಿರಲಿದೆ’.

‘ಸಾರ್ವಜನಿಕರು ಇ–ಮೇಲ್ sanmitraklecch@gmail.com, ವಾಟ್ಸ್ಆ್ಯಪ್ ಸಂಖ್ಯೆ 85508 87777 ಅಥವಾ ದೂ:0831-2413777/ 1237 ಮೂಲಕ ಸಂಪರ್ಕಿಸಬಹುದು’ ಎಂದು ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಯುಎಸ್ಎಂ–ಕೆಎಲ್ಇ ನಿರ್ದೇಶಕ ಡಾ.ಎಚ್.ಬಿ. ರಾಜಶೇಖರ ಹಾಗೂ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಸಿ. ಧಾರವಾಡ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.