ಸೋಮವಾರ, ಮಾರ್ಚ್ 1, 2021
19 °C

ಲಾಕ್‌ಡೌನ್ ಸಂಕಷ್ಟ ನೆನೆದು ಭಾವುಕರಾದ ಐಹೊಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಬಾಗ: ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಶಾಸಕ ಡಿ.ಎಂ. ಐಹೊಳೆ ಶನಿವಾರ ಚಾಲನೆ ನೀಡಿದರು.

ಕೊರೊನಾ ಸೇನಾನಿ ಡಾ.ರಮೇಶ ರಂಗಣ್ಣವರ ಮೊದಲ ಲಸಿಕೆ ಪಡೆದರು.

ಈ ವೇಳೆ ಮಾತನಾಡಿದ ಶಾಸಕರು, ‘ದೇಶದಾದ್ಯಂತ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿರುವ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರದಲ್ಲಿ ಜನರ ಆರೋಗ್ಯದ ಬಗ್ಗೆ ಮೋದಿ ಕಾಳಜಿ ವಹಿಸಿದ್ದಾರೆ’ ಎಂದರು.

ಲಾಕ್‌ಡೌನ್‌ ಸಂದರ್ಭ ಜನರು ಅನುಭವಿಸಿದ ಸಂಕಷ್ಟ ನೆನೆದು ಭಾವುಕರಾದರು.

ತಾ.ಪಂ. ಅಧ್ಯಕ್ಷೆ ಸುಜಾತಾ ಪಾಟೀಲ, ತಹಶೀಲ್ದಾರ್ ನೇಮಿನಾಥ ಗೆಜ್ಜೆ, ತಾಲ್ಲೂಕು ವೈದ್ಯಾಧಿಕಾರಿ ಡಾ.ಎಸ್.ಎಸ್. ಬಾನೆ, ಸಿಪಿಐ ಕೆ.ಎಸ್. ಹಟ್ಟಿ, ತಾ.ಪಂ. ಇಒ ಪ್ರಕಾಶ ವಡ್ಡರ, ಬಿಇಒ ಪ್ರಭಾವತಿ ಪಾಟೀಲ, ಟಿಎಚ್‌ಒ ಶಂಕರಗೌಡ ಪಾಟೀಲ, ಡಾ.ಸಂಧ್ಯಾ ಪಾಟೀಲ, ಡಾ.ರಾಘವ ರಾವಳಕರ, ಡಾ.ವಿನೋದ್ ಗಸ್ತಿ, ಡಾ.ಸದಾಶಿವ ಖಣದಾಳೆ, ಎಸ್.ಎಸ್. ಕಾಂಬಳೆ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು