ಭಾನುವಾರ, ಜೂನ್ 26, 2022
29 °C

ಜಿಲ್ಲಾ ಕಾಂಗ್ರೆಸ್‌ನಿಂದ 50 ಜನರಿಗೆ ಉಚಿತ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ತಾಲ್ಲೂಕಿನ ಹಂದಿಗನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕೋವಿಡ್-19 ಸಹಾಯವಾಣಿ ಸೇವಾ ಕೇಂದ್ರದಿಂದ ಕೋವಿಡ್ ಉಚಿತ ಲಸಿಕೆ ವಿತರಣೆ ಕಾರ್ಯಕ್ರಮ ಸೋಮವಾರ ನಡೆಯಿತು.

ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ ಅವರು ಸ್ವತಃ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಂಗ್ರಾಳಿ ಕೆ.ಎಚ್. ಹಾಗೂ ಹಂದಿಗನೂರು ಗ್ರಾಮದ 50 ಜನರು ಲಸಿಕೆ ಪಡೆದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ನೀಡಿದರು. ಸೇವಾ ಕೇಂದ್ರದ ಸದಸ್ಯರಾದ ಜಗದೀಶ ಸಾವಂತ, ರಾಜೇಂದ್ರ ಪಾಟೀಲ, ಆನಂದ ವೈದ್ಯ, ವಿಶಾಲ ಪಾಟೀಲ, ಶಹೀನ ವೈದ್ಯ, ಮಂಜುಳಾ ಬಡಿಗೇರ, ಉತ್ತಮ ಚಿಟ್ಟಿ, ಸಾವಿತ್ರಿ ಲಿಂಬೋಜಿ, ಪಯಜಾ ವಂಟಮುರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು