ಶುಕ್ರವಾರ, ಮಾರ್ಚ್ 31, 2023
31 °C

ಸಾವಳಗಿ: ಮೊಸಳೆಗಳಿಂದ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾವಳಗಿ (ಗೋಕಾಕ ತಾ.:) ಗ್ರಾಮದಲ್ಲಿ ಮೊಸಳೆ ಮರಿಗಳು ಕಾಣಿಸಿಕೊಳ್ಳುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಚನ್ನಪ್ಪ ಮಗದುಮ್ಮ ಅವರ ಮನೆ ಹತ್ತಿರವೇ ಮೊಸಳೆ ಮರಿಯೊಂದು ಬಂದಿರುವುದು ಭಾನುವಾರ ವರದಿಯಾಗಿದೆ.

‘ಸಂಬಂಧಿಸಿದ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ಆತಂಕ ನಿವಾರಣೆ ಮಾಡಬೇಕು’ ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

‘ನದಿ ದಂಡೆಯಲ್ಲಿ ಹಾಗೂ ಹೊಲದಲ್ಲಿ ಓಡಾಡುವಾಗ ಜನರು ಎಚ್ಚರಿಕೆ ವಹಿಸಬೇಕು. ಮೊಸಳೆ ಕಂಡುಬಂದಲ್ಲಿ ಪಂಚಾಯ್ತಿಗೆ ತಿಳಿಸಬೇಕು’ ಎಂದು ಗ್ರಾ.ಪಂ. ಸದಸ್ಯ ದರಪ್ಪ ಮಗದುಮ್ಮ ಕೋರಿದರು.

ಪ್ರಮುಖರಾದ ಶಿವಾನಂದ ಮಗದುಮ್ಮ, ಚನ್ನಪ್ಪ ಮಗದುಮ್ಮ, ಬಸವರಾಜ ತಂಬೂರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು