‘ಈ ಹುಳುಗಳ ಬೇಸಿಗೆಯಲ್ಲಿ ಮೊಟ್ಟೆ ಇಡುತ್ತವೆ. ಮಳೆಗಾಲದಲ್ಲಿ ತೇವಾಂಶ ಕಡಿಮೆಯಾದ ಜಾಗದಲ್ಲಿ ಬೆಳೆಯುತ್ತವೆ. ಕಬ್ಬು ಮಾತ್ರವಲ್ಲ; ಉಳಿದೆಲ್ಲ ಬೆಳಗಳಿಗೂ ಈ ಹುಳಗಳ ಕಾಟ ಇದ್ದೇ ಇದೆ’ ಎನ್ನುವುದು ಕೃಷಿ ಅಧಿಕಾರಿಗಳ ಮಾತು.
–ಶೀತಲ್ ಜಕಾತಿ
4 ಎಕರೆಯಲ್ಲಿ ಕಬ್ಬು ಗೋವಿನಜೋಳ ಹಾಕಿದ್ದೆ. ಹುಳುಗಳ ಕಾಟದಿಂದ ₹8 ಲಕ್ಷ ನಷ್ಟವಾಗಿದೆ. ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ
ಸುಧಾಕರ ಪಾಟೀಲ ರೈತ ಕಬ್ಬೂರ
₹50 ಸಾವಿರದ ಎಲೆಕೋಸು ಗಜ್ಜರಿ ನಾಟಿ ಮಾಡಿದ್ದೆ. ಎಲ್ಲವೂ ಡೊಣ್ಣೆಹುಳು ಪಾಲಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು
ಬಾಳೇಶ ಕಾಮಗೌಡ ರೈತ ಕಬ್ಬೂರ
ಸುಮಾರು 100 ಎಕರೆಯಲ್ಲಿ ಡೊಣ್ಣೆಹುಳು ಬಾಧೆ ಕಾಣಿಸಿದೆ. ಗ್ರಾಮಸೇವಕ ಹುದ್ದೆ ಖಾಲಿ ಇರುವ ಕಾರಣ ನಾವೇ ಸ್ಪಂದಿಸಿ ರೈತರಿಗೆ ಸಲಹೆ ನೀಡಿದ್ದೇವೆ
ರಮೇಶ ಚಡಚಾಳ ಕೃಷಿ ಅಧಿಕಾರಿ ನಾಗರಮುನ್ನೊಳ್ಳಿ
ನಿಯಂತ್ರಣ ಕ್ರಮಗಳೇನು?
ಜೈವಿಕ ಕೀಟನಾಶಕವಾದ ಮೆಟಾರೈಝಿಯೆಂ ಅನಿಸೋಪಿಲೆ ಶೀಲೀಂಧ್ರವನ್ನು ಪ್ರತಿ ಎಕರೆಗೆ 5-10 ಕಿ.ಗ್ರಾಂ (ಬಾಧೆಗೆ ಅನುಸಾರವಾಗಿ) 250- 500 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಕಬ್ಬಿನ ಬೆಳೆಯ ಸಾಲಿನಲ್ಲಿ ಹಾಕಬೇಕು.
ರಾಸಾಯನಿಕವಾಗಿ ಪ್ರತಿ ಎಕರೆಗೆ 100-200 ಗ್ರಾಂ ಇಮೀಡಾಕ್ಲೋಫ್ರಿಡ್ (ಶೇ.40), ಫೀಪ್ರೋನಿಲ್ (ಶೇ.40) ಡಬ್ಲುಜಿ ನೀರಿನಲ್ಲಿ ಬೆರೆಸಿ ಮಣ್ಣಿನಲ್ಲಿ ಇಂಗಿಸುವುದರ (ಡ್ರೆಂಚಿಂಗ್) ಅಥವಾ ಫೀಪ್ರೋನಿಲ್ ಹರಳುಗಳನ್ನು ಪ್ರತಿ ಎಕರೆಗೆ 7.5 ಕೆ.ಜಿ ಪ್ರಮಾಣವನ್ನು ಕಬ್ಬಿನ ಸಾಲಿನಲ್ಲಿ ಹಾಕಿ ನೀರು ಹಾಯಿಸುವದರ ಮೂಲಕ ಕಬ್ಬು ಬೆಳೆಯನ್ನು ಸಂರಕ್ಷಿಸಬಹುದು ಎಂದು ಕೃಷಿ ಸಹಾಯಕ ಕೃಷಿ ನಿರ್ದೇಶಕ ಡಿ.ಬಿ. ಚವ್ಹಾಣ ಸಲಹೆ ನೀಡಿದ್ದಾರೆ.