ಮಂಗಳವಾರ, ಸೆಪ್ಟೆಂಬರ್ 28, 2021
21 °C
ಆನ್ಲೈನ್ ಹನಿಟ್ರ್ಯಾಪ್ ಗ್ಯಾಂಗ್

ಬೆಳಗಾವಿ: ಫೇಸ್‌ಬುಕ್‌ನಲ್ಲಿ ಬೆತ್ತಲಾಗುವ ಚೆಲುವೆಯರು; ಹಣಕ್ಕಾಗಿ ಬ್ಲ್ಯಾಕ್‌ಮೇಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬರುವ ‘ಫ್ರೆಂಡ್ ರಿಕ್ವೆಸ್ಟ್‘ (ಸ್ನೇಹಿತರಾಗಲು ಮನವಿ) ಸ್ವೀಕರಿಸುವಾಗ ಬಹಳ ಎಚ್ಚರಿಕೆ ವಹಿಸಬೇಕು’ ಎಂದು ಡಿಸಿಪಿ ವಿಕ್ರಂ ಅಮಟೆ ಸಲಹೆ ನೀಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಬೆತ್ತಲಾಗುವ ಚೆಲುವೆಯರು ಬಳಿಕ ಬ್ಲ್ಯಾಕ್‌ಮೇಲ್‌ ಮಾಡಿ ಹಣ ಪಡೆಯುವ ಆನ್ಲೈನ್ ಹನಿಟ್ರ್ಯಾಪ್ ಗ್ಯಾಂಗ್ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ನಾಲ್ಕೈದು ಪ್ರಕರಣಗಳು ಬೆಳಗಾವಿಯಲ್ಲೂ ವರದಿಯಾಗಿವೆ. ಹಣ ಕಳೆದುಕೊಂಡ ಕೆಲವರು ಸಿಇಎನ್ ಅಪರಾಧ ಠಾಣೆಯ ಮೆಟ್ಟಿಲೇರಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ.

‘ಸೈಬರ್‌ ವಂಚಕರು ಫೇಸ್‌ಬುಕ್‌ನಲ್ಲಿ ಹುಡುಗಿಯರ ಹೆಸರಿನಲ್ಲಿ ಫ್ರೆಂಡ್ ರಿಕ್ವೆಸ್ಟ್‌ ಕಳುಹಿಸುತ್ತಾರೆ. ಅಕ್ಸೆಪ್ಟ್ ಮಾಡಿದ ಕೂಡಲೇ ‘ಮೆಸೆಂಜರ್‌ ಆ್ಯಪ್‌’ ಮೂಲಕ ಚಾಟ್ ಶುರು ಮಾಡುತ್ತಾರೆ. ಕೆಲ ದಿನಗಳವರೆಗೆ ಹೀಗೆ ಮಾಡಿ ವಿಶ್ವಾಸ ಗಳಿಸುತ್ತಾರೆ. ಬಳಿಕ ವಾಟ್ಸ್ಆ್ಯಪ್ ನಂಬರ್ ಕೇಳುತ್ತಾರೆ. ಅದರ ಮೂಲಕ ವಿಡಿಯೊ ಕರೆ ಮಾಡಿ, ನಗ್ನವಾಗಿ ಕಾಣಿಸಿಕೊಳ್ಳುತ್ತಾರೆ. ಎದುರಿನವರನ್ನು ನಗ್ನವಾಗುವಂತೆ ಪ್ರಚೋದಿಸುತ್ತಾರೆ. ಆ ಸಂಭಾಷಣೆ ಮತ್ತು ದೃಶ್ಯವನ್ನು ಸ್ಕ್ರೀನ್ ರೆಕಾರ್ಡಿಂಗ್ ಮಾಡಿಕೊಳ್ಳುತ್ತಾರೆ. ಬಳಿಕ ಇಂತಿಷ್ಟು ಹಣ ಕೇಳುತ್ತಾರೆ. ಕೊಡದಿದ್ದಲ್ಲಿ, ನಗ್ನವಾಗಿದ್ದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡುವುದಾಗಿ ಬೆದರಿಕೆಯೊಡ್ಡಿ ಹಣ ವಸೂಲಿ ಮಾಡುವುದು ವರದಿಯಾಗಿದೆ’ ಎಂದು ಅಮಟೆ ಮಾಹಿತಿ ನೀಡಿದರು.

‘ಅಪರಿಚಿತರಿಂದ ಬರುವ ‘ಫ್ರೆಂಡ್ ರಿಕ್ವೆಸ್ಟ್’ ಕಡೆಗಣಿಸಬೇಕು. ಮೆಸೆಂಜರ್‌ನಲ್ಲಿ ಚಾಟ್ ಮಾಡಬಾರದು. ಅಪರಿಚಿತರಿಂದ ವಾಟ್ಸ್‌ಆ್ಯಪ್‌ ವಿಡಿಯೊ ಕಾಲ್‌ ಬಂದಲ್ಲಿ ಸ್ವೀಕರಿಸಬಾರದು. ಒಂದು ವೇಳೆ ವಂಚನೆ ಆದಲ್ಲಿ ಅಥವಾ ಆಗಿದ್ದಲ್ಲಿ ಕೂಡಲೇ ಸಿಇಒ ಅಪರಾಧ ಠಾಣೆ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು