ಅಥಣಿ: ತಾಲ್ಲೂಕಿನ ಸಂಬರಗಿ ಗ್ರಾಮದಲ್ಲಿ ಸೋಮವಾರ ರಾತ್ರಿ ಬಲವಂತ ಟೋಣೆ ಅವರ ಮನೆಗೆ ನುಗ್ಗಿ ಮನೆಯವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು, ಸಂಜಯ ಟೋಣೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ದಾದಾಸಾಹೇಬ್ ಟೋಣೆ, ರವಿ ಮಿಸಾಳ, ರಮೇಶ ಬೋಸ್ಲೆ, ವಿಜಯ ನಾಟೆಕರ್, ಪಪ್ಪು ಬನ್ನೆ ಎಂಬುವವರು ಟೋಣೆ ಅವರ ಮನೆಗೆ ನುಗ್ಗಿ, ಬಾಗಿಲು ಮುರಿದು ಹಲ್ಲೆ ಯತ್ನಸಿದ್ದಾರೆ. ಈ ವೇಳೆ ತಡೆಯಲು ಬಂದ ಸಂಜಯ ಟೋಣೆ ಎಂಬುವವರಿಗೆ ಚಾಕುವಿನಿಂದ ಹೊಟ್ಟೆಗೆ ಮೂರು ಬಾರಿ ಇರಿದು ಹಲ್ಲೆ ಮಾಡಿದ್ದಾರೆ. ಮಕ್ಕಳನ್ನ ಮನ ಬಂದಂತೆ ಎಸೆದು ಮಹಿಳೆಯರ ಮೇಲೂ ಹಲ್ಲೆಗೆ ಎತ್ನಿಸಿದ್ದಾರೆ.

ಸಂಜಯ ಟೋಣೆ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಿರಜ್ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಆರೋಪಿಗಳು ಬಲವಂತ ಟೋಣೆಯವರ ಮಾಲೀಕತ್ವದ ಮಟನ್ ಅಂಗಡಿಯನ್ನು ಸಂಪೂರ್ಣವಾಗಿ ಧ್ವಂಸ ಮಾಡಿ, ಮನೆಯ ಮುಂದೆ ನಿಂತಿದ್ದ 4 ಬೈಕ್ಗಳನ್ನು ಹಾಳು ಮಾಡಿದ್ದಾರೆ. ಪಿಕಪ್ ವಾಹನದ ಮೇಲೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾರೆ.

ಘಟಣೆ ತಿಳಿದು ಗ್ರಾಮಸ್ಥರು ತಡೆಯಲು ಬಂದಾಗ, ಮಚ್ಚಿನಿಂದ ಕೊಚ್ಚಿ ಹಾಕುವುದಾಗಿ ಬೆದರಿಸಿದ್ದಾರೆ. ಘಟಣೆ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಥಣಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಅಥಣಿ ಸಿಪಿಐ ಸಂತೋಷ ಹಳ್ಳೂರ, ಪಿಎಸ್ಐ ಗೀರಿಮಲ್ಲಪ್ಪಾ ಉಪ್ಪಾರ ಭೇಟಿ ನೀಡಿ, ಆರೋಪಿಗಳನ್ನು ಬಂಧಿಸಲು ಕ್ರಮವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.