ಶುಕ್ರವಾರ, ಮಾರ್ಚ್ 5, 2021
29 °C

ಹಳೆಯ ಮಾರುಕಟ್ಟೆಯಲ್ಲೇ ಮಳಿಗೆ ನೀಡುವಂತೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರದ ಹಳೆಯ ಸಗಟು ತರಕಾರಿ ಮಾರುಕಟ್ಟೆಯಲ್ಲೇ ಮಳಿಗೆಗಳನ್ನು ಆರಂಭಿಸಿ ವ್ಯಾಪಾರ ನಡೆಸಲು ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿ ವ್ಯಾಪಾರಸ್ಥರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ಮಾಡಿದರು.  

‘ಎಪಿಎಂಸಿ ಆವರಣದಲ್ಲಿ ನಿರ್ಮಿಸಲಾಗಿರುವ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಕೆಲವೇ ಜನರಿಗೆ ಮಾತ್ರ ಮಳಿಗಳು ಲಭ್ಯವಾಗಿವೆ. ಆದರೆ, ಇನ್ನುಳಿದ ವ್ಯಾಪಾರಿಗಳಿಗೆ 6 ತಿಂಗಳ ಬಳಿಕ ಹೊಸ ಅಂಗಡಿ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ, ಯಾರಿಗೆ ಅಂಗಡಿಗಳು ಸಿಕ್ಕಿಲ್ಲವೋ ಅವರಿಗೆ ಹಳೆಯ ಮಾರುಕಟ್ಟೆಯಲ್ಲಿ ಮಳಿಗೆ ಆರಂಭಿಸಲು ಅನುಮತಿ ನೀಡಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ಎಪಿಎಂಸಿಯಲ್ಲಿ ವ್ಯಾಪಾರ ನಡೆಸುವವರ ಅಂಗಡಿಗಳು ರವಿವಾರ ಪೇಟೆಯಲ್ಲಿಯೂ ಇವೆ. ಹೀಗಾಗಿ, ನಮಗೂ ಬೇರೆ ಕಡೆ ಅವಕಾಶ ಮಾಡಿಕೊಡಬೇಕು. ಹಳೆಯ ಮಾರುಕಟ್ಟೆ ನಗರದ ಮಧ್ಯ ಭಾಗದಲ್ಲಿದ್ದು, ತರಕಾರಿ ಮಾರಾಟ ಹಾಗೂ ಖರೀದಿಗೆ ಅತ್ಯಂತ ಸೂಕ್ತ ಸ್ಥಳವಾಗಿದೆ. ಹೊಸ ಮಾರುಕಟ್ಟೆ ನಗರದಿಂದ 7–8 ಕಿ.ಮೀ. ದೂರದಲ್ಲಿದೆ. ಇದರಿಂದ ಅಲ್ಲಿ ಹೋಗಿ–ಬರುಲು ಸಮಸ್ಯೆಯಾಗುತ್ತಿದೆ. ವಾಹನಗಳಲ್ಲಿ ತರಕಾರಿ ತೆಗೆದುಕೊಂಡು ಹೋಗಲು ಹೆಚ್ಚು ಬಾಡಿಗೆ ನೀಡಬೇಕಾಗಿರುವುದರಿಂದ ರೈತರು ಕೂಡ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ವ್ಯಾಪಾರಿಗಳಾದ ಆರ್.ಕೆ. ಪಾವಸೆ, ಜಮೀರುದ್ದಿನ್ ಹಂಚಿನಮನಿ, ಕುಮಾರ ಜೋಶಿ, ಸಂಜಯ ಪಾಟೀಲ, ಇಸ್ಮಾಯಿಲ್ ಬಾಗವಾನ್, ಆಸಿಫ್ ಹಂಚಿನಮನಿ  ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು