ಶೀಘ್ರವೇ ಸೇವೆ ಆರಂಭ: ಶೆಟ್ಟರ್
‘ಬೆಂಗಳೂರು-ಧಾರವಾಡ ಮಧ್ಯೆ ಸಂಚರಿಸುತ್ತಿರುವ ‘ವಂದೇ ಭಾರತ್’ ರೈಲಿನ ಸೇವೆ ಬೆಳಗಾವಿಗೆ ವಿಸ್ತರಿಸಲು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಒಪ್ಪಿಗೆ ಕೊಟ್ಟಿದ್ದಾರೆ. ಪರಿಷ್ಕೃತ ವೇಳಾಪಟ್ಟಿ ಸಿದ್ಧವಾಗುತ್ತಿದ್ದು ಬೆಂಗಳೂರು–ಬೆಳಗಾವಿ ಮಾರ್ಗದ ರೈಲಿನ ಸೇವೆ ಶೀಘ್ರವೇ ಆರಂಭವಾಗಲಿದೆ’ ಎಂದು ಸಂಸದ ಜಗದೀಶ ಶೆಟ್ಟರ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಈಗ ಕಾರ್ಯಾಚರಣೆ ಮಾಡುತ್ತಿರುವ ರೈಲಿನ ವೇಳಾಪಟ್ಟಿ ಗಮನಿಸಿದರೆ ಸಮಯದ ಹೊಂದಾಣಿಕೆ ಕಷ್ಟ. ಹಾಗಾಗಿ ಬೆಳಿಗ್ಗೆ 5ಕ್ಕೆ ಬೆಳಗಾವಿಯಿಂದಲೇ ಸಂಚಾರ ಆರಂಭಿಸಲು ಪ್ರಯತ್ನಿಸಲಾಗುತ್ತಿದೆ. ಅದು ಅಂತಿಮವಾದರೆ ರೈಲು ಮಧ್ಯಾಹ್ನ 12.30ಕ್ಕೆ ಬೆಂಗಳೂರು ತಲುಪಲಿದ್ದು 1.30ಕ್ಕೆ ಅಲ್ಲಿಂದ ಹೊರಟು ರಾತ್ರಿ 9ಕ್ಕೆ ಬೆಳಗಾವಿಗೆ ವಾಪಸಾಗಲಿದೆ’ ಎಂದರು.