ಬೆಳಗಾವಿ: ವೇತನ ಬಿಡುಗಡೆಗೆ ಆಗ್ರಹಿಸಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕರ್ನಾಟಕ ಪಬ್ಲಿಕ್ ಶಾಲೆಗಳ ಪೂರ್ವ ಪ್ರಾಥಮಿಕ ಶಿಕ್ಷಕಿಯರು ಹಾಗೂ ಆಯಾಗಳುಇಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

‘ರಾಜ್ಯದಲ್ಲಿ 2019ರಲ್ಲಿ 276 ಕರ್ನಾಟಕ ಪಬ್ಲಿಕ್ ಶಾಲೆಗಳು ಆರಂಭವಾಗಿವೆ. ತಲಾ 276 ಎಲ್‌ಕೆಜಿ ಶಿಕ್ಷಕಿಯರು ಹಾಗೂ ಆಯಾಗಳನ್ನು 10 ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗಿತ್ತು. ಎಲ್ಲರನ್ನೂ ಪ್ರಸ್ತುತ ವರ್ಷವೂ ಯುಕೆಜಿ ಶಿಕ್ಷಕಿಯರನ್ನಾಗಿ ಮುಂದುವರಿಸಲಾಗಿದೆ. ಪ್ರಸಕ್ತ ಸಾಲಿನ ಎಲ್‌ಕೆಜಿ ತರಗತಿಗಳ ನಿರ್ವಹಣೆಗಾಗಿ ಮತ್ತಷ್ಟು ಶಿಕ್ಷಕಿಯರನ್ನು ಆಯ್ಕೆ ಮಾಡಿಕೊಂಡು ತರಬೇತಿಯನ್ನೂ ನೀಡಲಾಗಿದೆ. ನಮಗೆ ಐದು ತಿಂಗಳ ವೇತನವನ್ನೂ ನೀಡಿಲ್ಲ. ಬೇರೆ ಕೆಲಸಕ್ಕೆ ಹೋಗಲಾಗದೆ, ವೇತನವೂ ದೊರೆಯದೆ ಮತ್ತು ಆಯ್ಕೆಯಾಗಿರುವ ಶಾಲೆಗಳನ್ನೂ ಬಿಡಲಾಗದೆ ತೊಂದರೆಗೆ ಒಳಗಾಗಿದ್ದೇವೆ’ ಎಂದು ತಿಳಿಸಿದರು.

‘ಕೋವಿಡ್ ನೆರವನ್ನೂ ನೀಡಿಲ್ಲದಿರುವುದರಿಂದ ಜೀವನ ನಿರ್ವಹಣೆಗೆ ಪರದಾಡುತ್ತಿದ್ದೇವೆ’ ಎಂದು ಕಣ್ಣೀರಿಟ್ಟರು. ‘ಕೂಡಲೇ ವೇತನ ಬಿಡುಗಡೆಗೊಳಿಸಿ ಅನುಕೂಲ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.