ಬೆಳಗಾವಿ: ಹಿಡಕಲ್ ಡ್ಯಾಂ ಬಳಿ ಇರುವ ವಿಶೇಷ ಭೂಸ್ವಾಧೀನ ಅಧಿಕಾರಿ ಕಚೇರಿಯನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸುವಂತೆ ಇಲ್ಲಿನ ವಕೀಲರ ಸಂಘದವರು ಜಿಲ್ಲಾಧಿಕಾರಿ ಕಚೇರಿಗೆ ಗುರುವಾರ ಮನವಿ ಸಲ್ಲಿಸಿದರು.

‘ಈಗಿರುವ ಕಚೇರಿ ಶಿಥಿಲಗೊಂಡಿವೆ. ಇದರಿಂದಾಗಿ ಪರಿಹಾರ ಮತ್ತು ವ್ಯಾಜ್ಯ ನಿರ್ಣಯಕ್ಕಾಗಿ ಕಚೇರಿಗೆ ಬರುವ ರೈತರು, ಕಕ್ಷಿದಾರರು ಮತ್ತು ವಕೀಲರಿಗೆ ತೊಂದರೆ ಆಗುತ್ತಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಘಟಪ್ರಭಾ, ಮಾರ್ಕಂಡೇಯ, ಬಳ್ಳಾರಿ ನಾಲಾ, ತಿಗಡಿ ನಾಲಾ ಮತ್ತು ಹಲವು ಏತ ನೀರಾವರಿ ಯೋಜನೆಗಳಿಗೆ ರೈತರಿಂದ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಈ ವಿಚಾರವಾಗಿ ಸಂಬಂಧಿಸಿದ ಕಚೇರಿಗೆ ಭೇಟಿ ನೀಡಲು ರೈತರಿಗೆ ತೊಂದರೆ ಆಗುತ್ತಿದೆ. ಹಿಡಕಲ್‌ನಲ್ಲಿರುವ ಕಚೇರಿಗೆ ಹೋಗಿ ಬರುವುದಕ್ಕೆ ಸಮರ್ಪಕ ಸಾರಿಗೆ ವ್ಯವಸ್ಥೆಯೂ ಇಲ್ಲ. ಕಟ್ಟಡ ಸೋರುತ್ತಿದ್ದು, ಹಲವು ದಾಖಲೆಗಳಿಗೆ ಹಾನಿಯಾಗಿದೆ. ಹೀಗಾಗಿ, ಇಲ್ಲಿಗೆ ಸ್ಥಳಾಂತರಿಸಿದರೆ ಬಳಕೆದಾರರಿಗೆ ಅನುಕೂಲ ಆಗುತ್ತದೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಸಿ. ಪಾಟೀಲ ತಿಳಿಸಿದರು.

ಉಪಾಧ್ಯಕ್ಷ ಗಜಾನನ ಪಾಟೀಲ ಹಾಗೂ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.