ಶುಕ್ರವಾರ, ಅಕ್ಟೋಬರ್ 30, 2020
25 °C

ಸಾಂಬ್ರಾ ವಿಮಾನ ನಿಲ್ದಾಣ: ಎಕೆ- 47ನಲ್ಲಿ ಬಳಸುವ ಜೀವಂತ ಗುಂಡು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ವೇಳೆ ಸೈನಿಕರೊಬ್ಬರ ಬಳಿ ಎಕೆ- 47ನಲ್ಲಿ ಬಳಸುವ ಒಂದು ಜೀವಂತ ಗುಂಡು ಹಾಗೂ ಬಳಸಿದ ಗುಂಡಿನ ಒಂದು ಕೇಸ್ (ಐಎನ್ಎಸ್ಎಎಸ್) ಪತ್ತೆಯಾಗಿದ್ದು, ಅವರನ್ನು ಹೆಚ್ಚಿನ‌ ವಿಚಾರಣೆಗಾಗಿ ಮರಾಠಾ ಲಘು ಪದಾತಿ ದಳದ (ಎಂಎಲ್ಐಆರ್ ಸಿ) ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ.

ಅವರನ್ನು ನಾಯಕ್ ಸುಬೇದಾರ್ ಅರುಣ್ ಮಾರುತಿ ಭೋಸಲೆ ಎಂದು ಗುರುತಿಸಲಾಗಿದೆ.

‘ಪರಿಶೀಲನೆ ವೇಳೆ ಗುಂಡು ಹಾಗೂ ಕೇಸ್ ಪತ್ತೆಯಾಗಿದೆ. ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದ ಅವರು ರಜೆ ಮೇಲೆ ಊರಿಗೆ ಬಂದಿದ್ದರು. ರಜೆ ಮುಗಿಸಿ ಜಮ್ಮು ಕಾಶ್ಮೀರಕ್ಕೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಶನಿವಾರ ತೆರಳುತ್ತಿದ್ದರು. ಅವರನ್ನು ಕೈಗಾರಿಕಾ ಭದ್ರತಾ ಪಡೆಯ ಪೊಲೀಸರು ಪರಿಶೀಲನೆ ನಡೆಸುವಾಗ ಗುಂಡು ಹಾಗೂ ಕೇಸ್ ಸಿಕ್ಕಿದೆ. ಹೀಗಾಗಿ ಮುಂದಿನ ಕ್ರಮಕ್ಕಾಗಿ ಅವರನ್ನು ಎಂ ಎಲ್ ಐ ಆರ್ ಸಿಯವರಿಗೆ ಒಪ್ಪಿಸಲಾಗಿದೆ’ ಎಂದು ಮಾರಿಹಾಳ ಠಾಣೆ ಇನ್ ಸ್ಪೆಕ್ಟರ್ ಬಿ.ಎಸ್. ಮಂಟೂರ್ 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು