ಶನಿವಾರ, ಜನವರಿ 29, 2022
22 °C

ರುದ್ರಾಕ್ಷಿ ಮಠ: ತಾಳೆಪತ್ರಗಳ ಡಿಜಿಟಲೀಕರಣಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕನ್ನಡ ಹಾಗೂ ವಚನ ಸಾಹಿತ್ಯ ಉಳಿಸುವ ಉದ್ದೇಶದಿಂದ ನಾಗನೂರು ರುದ್ರಾಕ್ಷಿಮಠದಲ್ಲಿ ಸಂಗ್ರಹಿಸಿರುವ ತಾಳೆಪತ್ರಗಳ ಡಿಜಿಟಲೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ’ ಎಂದು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ತಿಳಿಸಿದರು.

‘ಶಿವಬಸವ ನಗರದಲ್ಲಿರುವ ಮಠದ ವಚನ ಅಧ್ಯಯನ ಕೇಂದ್ರದಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಸುಮಾರು 400–500 ವರ್ಷಗಳು ಹಳೆಯದಾದ ತಾಳೆಪತ್ರಗಳಿಗೆ ಡಿಜಿಟಲ್‌ ಸ್ಪರ್ಶ ನೀಡಲಾಗುತ್ತಿದೆ. ಅಶೋಕ ದೇಮನೂರು ನೇತೃತ್ವದಲ್ಲಿ ನಡೆದಿದೆ. ಕನ್ನಡ ಸಾಹಿತ್ಯದ ಇತಿಹಾಸ ಉಳಿಸುವ ಕಾರ್ಯ ಈ ಮೂಲಕ ಆಗುತ್ತಿದೆ’ ಎಂದರು.

‘ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಛಿಸುವ ಸಾಹಿತ್ಯ ಆಸಕ್ತರು ಕೂಡ ಪಾಲ್ಗೊಳ್ಳಬಹುದಾಗಿದೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಮುಖಂಡ ಶಂಕರ ಗುಡಸ್ ಮಾತನಾಡಿ, ‘ತಾಳೆಗರಿಗಳು ಹಾಳಾದರೆ ಅವುಗಳಲ್ಲಿರುವ ಮಾಹಿತಿಯೂ ಕಳೆದು ಹೋಗುತ್ತದೆ. ಆಗ ನಮಗೆ ಇತಿಹಾಸ ಸಿಗುವುದಿಲ್ಲ. ಶ್ರೀಗಳ ಆಶಯದಂತೆ ಡಿಜಿಟಲೀಕರಣ ನಡೆಯುತ್ತಿದೆ. ಇದಕ್ಕೆ ಸ್ವಯಂಸೇವಕರು ಬೇಕಾಗಿದ್ದಾರೆ. 20 ದಿನಗಳವರೆಗೆ ನಡೆಯಲಿರುವ ಈ ಕಾರ್ಯದಲ್ಲಿ ಕನ್ನಡ ಮತ್ತು ವಚನ ಸಾಹಿತ್ಯದ ಅಭಿಮಾನಿಗಳು ಭಾಗವಹಿಸಬೇಕು’ ಎಂದು ಕೋರಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು