ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಖಾನಾಪುರ ಬಳಿ ಕಾಡುಕೋಣ ತಿವಿದು ವೃದ್ಧೆ ಸಾವು

ಸರಸ್ವತಿ ಅರ್ಜುನ ಗಾವಡೆ (80) ಎನ್ನುವರು ಮೃತಪಟ್ಟಿದ್ದಾರೆ.
Published 8 ಏಪ್ರಿಲ್ 2024, 16:24 IST
Last Updated 8 ಏಪ್ರಿಲ್ 2024, 16:24 IST
ಅಕ್ಷರ ಗಾತ್ರ

ಖಾನಾಪುರ (ಬೆಳಗಾವಿ ಜಿಲ್ಲೆ): ಖಾನಾಪುರ ತಾಲ್ಲೂಕಿನ ಅಮಟೆ ಗ್ರಾಮದ ಹೊರವಲಯದಲ್ಲಿ ಸೋಮವಾರ ಕಾಡುಕೋಣ ತಿವಿದ ಪರಿಣಾಮ ಗ್ರಾಮದ ಸರಸ್ವತಿ ಅರ್ಜುನ ಗಾವಡೆ (80) ಮೃತಪಟ್ಟಿದ್ದಾರೆ.

‘ಮನೆಯಿಂದ ಹೊಲಕ್ಕೆ ಗೋಡಂಬಿ ಕಾಯಿಗಳನ್ನು ಕೀಳಲು ಹೊರಟ ಸಂದರ್ಭದಲ್ಲಿ ಸರಸ್ವತಿ ಅವರ ಹೊಟ್ಟೆಗೆ ಕಾಡುಕೋಣ ಕೋಡಿನಿಂದ ತಿವಿದಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಪ್ರಯೋಜನವಾಗಲಿಲ್ಲ’ ಎಂದು ಖಾನಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT