ಗುರುವಾರ , ಜೂನ್ 17, 2021
21 °C

ಆತ್ಮರಕ್ಷಣೆಗಾಗಿ ಕರಾಟೆ ಕಲಿಯಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ‘ಆತ್ಮರಕ್ಷಣೆಗಾಗಿ ಪ್ರತಿಯೊಬ್ಬರೂ ಕರಾಟೆ ಕಲಿಯಬೇಕು’ ಎಂದು ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಇಲ್ಲಿನ ಐಎಂಎ ಸಭಾಂಗಣದಲ್ಲಿ ಮಾನವ ಹಕ್ಕುಗಳ ರಕ್ಷಣಾ ಸಂಘ, ಶೋಟೋಕಾನ್ ಕರಾಟೆ ಅಕಾಡೆಮಿಯಿಂದ ಈಚೆಗೆ ನಡೆದ ಸತ್ಕಾರ ಸಮಾರಂಭಲ್ಲಿ ಅವರು ಮಾತನಾಡಿದರು.

‘ಕರಾಟೆ ಕಲೆಯು ಸಮಾಜದ ಆರೋಗ್ಯ ರಕ್ಷಣೆಗೂ ಸಹಕಾರಿಯಾಗಿದೆ’ ಎಂದರು.

ಗೋವಾದಲ್ಲಿ ಈಚೆಗೆ ನಡೆದ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನಶಿಪ್‌ನಲ್ಲಿ ಪದಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ 23 ಪಟುಗಳನ್ನು ಸತ್ಕರಿಸಲಾಯಿತು.

ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಮಾನವ ಹಕ್ಕುಗಳ ರಕ್ಷಣಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಜಾರಾಮ ಪವಾರ, ಕರಾಟೆ ತರಬೇತುದಾರ ಮೋಹನಸಿಂಗ್ ರಜಪೂತ ಮಾತನಾಡಿದರು.

ಹಿರೇಮಠದ ಡಾ.ಕಾಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾನವ ಹಕ್ಕುಗಳ ರಕ್ಷಣಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಎಂ.ಡಿ. ಚೌಧರಿ, ವಕೀಲ ರಾವಸಾಬ ಜಕನೂರ, ಮುಖಂಡರಾದ ಶಂಕರ ಮಟ್ಟೆಪ್ಪನವರ, ರವಿ ಪೂಜಾರಿ, ಮಹಾದೇವ ಮಡಿವಾಳ, ಯಾಸ್ಮಿನ್‌, ಭಾರತಿ ಮೆಂಡಿಗೇರಿ, ಗಜಾನನ ಪಾಟೀಲ, ಸತೀಶ ಪಾಟೀಲ, ಅಮರೇಂದ್ರ ನಿಕ್ಕಂ, ಗಜಾನನ ಠಕ್ಕಣ್ಣವರ, ಸುರೇಶ ಕಾಳೇಲಿ, ಗೌತಮ ಪರಾಂಜಪೆ, ಪೈಗಂಬರ ಪಠಾಣ, ದಾಮೋದರ ಪಾಟೀಲ, ಅವಿನಾಶ ಪಾಟೀಲ, ವಿಠ್ಠಲ ಪವಾರ, ಅಮೀರ ಇನಾಂದಾರ, ಎಸ್. ಪಠಾಣ, ಕೃಷ್ಣು ಮಾನೆ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು