ನಿಪ್ಪಾಣಿ: ‘ಜ.16 ರಿಂದ 31ರವರೆಗಿನ 5ನೇ ಪಾಕ್ಷಿಕದಲ್ಲಿ ನಮ್ಮ ಕಾರ್ಖಾನೆ 87,745 ಮೆ.ಟನ್ ಕಬ್ಬು ನುರಿಸಿದ್ದು ಅದರ ಬಿಲ್ ₹29.04 ಕೋಟಿಯನ್ನು ಆಯಾ ರೈತರ ಬ್ಯಾಂಕ್ ಖಾತೆಗೆ ಗುರುವಾರ ಫೆ.5 ರಂದು ಜಮೆ ಮಾಡಲಾಗುವುದು ಎಂದು ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲಗೊಂಡಾ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜ.15ರ ವರೆಗೆ 4,55,141 ಮೆ.ಟನ್ ಕಬ್ಬು ನುರಿಸಿದ್ದು ಅದರ ಬಿಲ್ ₹150.65 ಕೋಟಿ ಆಯಾ ರೈತರ ಬ್ಯಾಂಕ್ ಖಾತೆಗೆ ಈ ಹಿಂದೆ ಸಂದಾಯ ಮಾಡಲಾಗಿದೆ. ಕಾರ್ಖಾನೆಯು ಮುಂದಿನ ದಿನಮಾನಗಳಲ್ಲಿ ಕೂಡ ಸಕಾಲದಲ್ಲಿ ಕಬ್ಬಿನ ಬಿಲ್ ಪಾವತಿಗೆ ಪೂರ್ವಸಿದ್ಧತೆ ಮಾಡಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬು ಪೂರೈಸಿ ಕಾರ್ಖಾನೆಯ ಆರ್ಥಿಕ ಏಳ್ಗೆಗಾಗಿ ಕೈಜೋಡಿಸಿ ಎಂದು ಅವರು ಮನವಿ ಮಾಡಿದ್ದಾರೆ.

ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆಯವರ ಮಾರ್ಗದರ್ಶದಲ್ಲಿ ಜೊಲ್ಲೆ ಗ್ರುಪ್ ವತಿಯಿಂದ ಮಾ.11 ರಿಂದ 15 ರವರೆಗೆ ಕಾರ್ಖಾನೆಯ ಆವರಣದಲ್ಲಿ ಕೃಷಿ ಉತ್ಸವವನ್ನು (ದ್ವಿತೀಯ ಆವೃತ್ತಿ) ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿದ್ದು ಮಳಿಗೆಗಳ ಬುಕಿಂಗ್ ಪ್ರಾರಂಭವಾಗಿದೆ, ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 8329377039ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.