ಬುಧವಾರ, ಜುಲೈ 28, 2021
24 °C

ಅಥಣಿ | ಕೆನರಾ ಬ್ಯಾಂಕ್‌ಗೆ ವ್ಯವಸ್ಥಾಪಕರ ನೇಮಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ‘ತಾಲ್ಲೂಕಿನ ಕೋಹಳ್ಳಿ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಮ್ಯಾನೇಜರ್‌ ಹುದ್ದೆ ಒಂದು ವರ್ಷದಿಂದ ಖಾಲಿ ಇದೆ. ಕೂಡಲೇ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಅಲ್ಲಿನ ರೈತರು ಬುಧವಾರ ಪ್ರಭಾರ ವ್ಯವಸ್ಥಾಪಕ ಹಾಗೂ ಚಿಕ್ಕೋಡಿ ಮುಖ್ಯ ಕೇಂದ್ರ ಕಚೇರಿಯ ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.

‘ಈ ಶಾಖೆ ವ್ಯಾಪ್ತಿಯಲ್ಲಿ ರಾಮತೀರ್ಥ, ಕೋಹಳ್ಳಿ, ಅಡಹಳ್ಳಿ, ಅಡಹಳ್ಳಟ್ಟಿ, ಯಲಿಹಡಲಗಿ ಗ್ರಾಮಗಳು ಬರುತ್ತವೆ. 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ವ್ಯವಸ್ಥಾಪಕರು ಇಲ್ಲದಿರುವುದರಿಂದ ಹಲವು ವ್ಯವಹಾರಗಳಿಗೆ ತೊಂದರೆ ಆಗುತ್ತಿದೆ. ಶೈಕ್ಷಣಿಕ, ಮನೆ ಹಾಗೂ ಬೆಳೆ ಸಾಲ ಮಂಜೂರು ಮಾಡಲು ನನಗೆ ಅಧಿಕಾರವಿಲ್ಲ ಎಂದು ಪ್ರಭಾರ ವ್ಯವಸ್ಥಾಪಕರು ಹೇಳುತ್ತಾರೆ. ಹೀಗಾಗಿ, ಕಾಯಂ ವ್ಯವಸ್ಥಾಪಕರನ್ನು ನೇಮಿಸಿಬೇಕು’ ಎಂದು ಕೋರಿದರು.

‘ಶಾಖೆಯಲ್ಲಿ ಎಟಿಎಂ ವ್ಯವಸ್ಥೆ ಮಾಡಬೇಕು’ ಎಂದು ಕೋರಿದರು.

ರೈತರಾದ ನೂರಹ್ಮದ್ ಡೊಂಗರಗಾಂವ, ಸದಾಶಿವ ಹರಪಾಳೆ, ಚಿದಾನಂದ ತಳಕೇರಿ, ತುಕಾರಾಮ ಫಡತಾರೆ, ಶ್ರೀಕಾಂತ ಆಲಗೂರ, ಮೆಹೆಬೂಬ ಪಡಸಲಗಿ, ಈರಪ್ಪ ತಮದಡ್ಡಿ, ಕೇದಾರಿ ವಳಸಂಗ, ಜೈಸಿಂಗೌಡ ಪಾಟೀಲ, ಸಂಗಪ್ಪ ಮಾಯನಟ್ಟಿ, ಪಕೀರ ತಳಕೇರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು