ಶನಿವಾರ, ಮಾರ್ಚ್ 6, 2021
21 °C

ಬೆಳಗಾವಿ| ಮುಖ್ಯಮಂತ್ರಿ ಯಡಿಯೂರಪ್ಪಗೆ ರೈತ ಮುಖಂಡರ ಘೇರಾವ್ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿಗೆ ಘೇರಾವ್ ಹಾಕಲು ಮುಂದಾದ ರೈತ ಮುಖಂಡರು

ಬೆಳಗಾವಿ: ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಘೇರಾವ್ ಹಾಕಲು ಮುಂದಾದ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.

ಇಲ್ಲಿನ ಅತಿಥಿ ಗೃಹದಿಂದ ತೆರಳುತ್ತಿದ್ದ ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗುತ್ತಿದ್ದರು. ಮುಖ್ಯಮಂತ್ರಿ ಕಾರಿನಿಂದ ಇಳಿದು ತಮ್ಮಿಂದ ಮನವಿ ಸ್ವೀಕರಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯಲ್ಲಿ ಮಲಗಿ ಪ್ರತಿಭಟನೆಗೆ ಮುಂದಾದ ರೈತ ಮಹಿಳೆ ಜಯಶ್ರೀ ಗುರಣ್ಣವರ ಮೊದಲಾದವರನ್ನು ಪೊಲೀಸರು ಎಳೆದಾಡಿದರು. ರಸ್ತೆ ಬದಿಗೆ ತಂದು ಬಿಟ್ಟರು.

ಇದನ್ನೂ ಓದಿ: ಪ್ರವಾಹ ನಷ್ಟದ ಅಂದಾಜು ವರದಿಯನ್ನು ಕೇಂದ್ರ ತಿರಸ್ಕರಿಸಿಲ್ಲ: ಯಡಿಯೂರಪ್ಪ ಸಮರ್ಥನೆ

ರೈತರ ಮಗ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ನಮ್ಮಿಂದ ಮನವಿ ಸ್ವೀಕರಿಸಿ ಅಹವಾಲು ಆಲಿಸುವ ಕಾಳಜಿ ತೋರಿಸಬೇಕಿತ್ತು. ನಿನ್ನೆ ಮನವಿ ಕೊಡಲು ಹೋದಾಗಲೂ ನೀವು ಹೇಳಿದಷ್ಟು ಪರಿಹಾರ ಕೊಡಲಾಗದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೂಡ ರೇಗಾಡಿದರು. ಹೀಗಾದರೆ ಹೇಗೆ? ಸರ್ಕಾರದ ಬಳಿ ಹಣ ಇಲ್ಲವಾದರೆ ಸಂತ್ರಸ್ತರನ್ನು ಭೇಟಿಯಾಗುವ ನಾಟಕವನ್ನೇಕೆ ಮಾಡುತ್ತಿದ್ದಾರೆ ಎಂದು ಜಯಶ್ರೀ ಕೇಳಿದರು.

ಇದನ್ನೂ ಓದಿ: ಪ್ರವಾಹ ನಷ್ಟದ ಅಂದಾಜು: ರಾಜ್ಯದ ವರದಿ ತಿರಸ್ಕರಿಸಿದ ಕೇಂದ್ರ

ಇದಕ್ಕೂ ಮುನ್ನ ಅತಿಥಿಗೃಹದ ಆವರಣದಲ್ಲಿ ಮನವಿ ಸಲ್ಲಿಸಿದ ರೈತ ಮುಖಂಡರ ಇನ್ನೊಂದು ಗುಂಪು ಸಮರ್ಪಕವಾಗಿ ಪರಿಹಾರ ನೀಡುವಂತೆ ಆಗ್ರಹಿಸಿತು. ಪರಿಹಾರಕ್ಕಾಗಿ ಘೋಷಣೆ ಕೂಗಿತು.

ಇದನ್ನೂ ಓದಿ: ನೆರೆ ಸಂತ್ರಸ್ತರಿಗೆ ಕೇಂದ್ರಸರ್ಕಾರದಿಂದ ಬಿಡುಗಡೆಯಾಗದ ಪರಿಹಾರ: ಅಸಹಾಯಕರಾದ ಸಿ.ಎಂ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು