ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಲಹೊಂಗಲ: ಹುಲ್ಲು ತೆಗೆಯುವ ವೇಳೆ ವಿದ್ಯುತ್ ಅವಘಡ– ತಂದೆ, ಮಗ ಸಾವು

Published 1 ಸೆಪ್ಟೆಂಬರ್ 2023, 6:29 IST
Last Updated 1 ಸೆಪ್ಟೆಂಬರ್ 2023, 6:29 IST
ಅಕ್ಷರ ಗಾತ್ರ

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ‌ ಉಡಿಕೇರಿ ಗ್ರಾಮದಲ್ಲಿ ಶುಕ್ರವಾರ ಮನೆ ಮುಂದಿನ ಹುಲ್ಲು ತೆಗೆಯುವ ವೇಳೆ ವಿದ್ಯುತ್ ತಗುಲಿ ತಂದೆ, ಮಗ ಸಾವಿಗೀಡಾಗಿದ್ದಾರೆ.

ಕೃಷಿಕರಾದ ಪ್ರಭು ಹುಂಬಿ (68) ಹಾಗೂ ಇವರ ಪುತ್ರ ಮಂಜುನಾಥ (29) ಮೃತಪಟ್ಟವರು.

ಮನೆ ಮುಂದಿನ‌ ವಿದ್ಯುತ್ ಕಂಬಕ್ಕೆ ಬ್ಯಾಲೆನ್ಸಿಗೆ ಹಾಕಲಾಗಿದ್ದ ತಂತಿಗೆ ಮೇನ್ ಲೈನ್ ವಿದ್ಯುತ್ ತಂತಿ ಜೋಡಿಸಲಾಗಿತ್ತು. ತಂತಿ ಸುತ್ತ ಬೆಳೆದಿದ್ದ ಹುಲ್ಲು ತೆಗೆಯುವ ವೇಳೆ ಪ್ರಭು ಹುಂಬಿ ಅವರಿಗೆ ವಿದ್ಯುತ್ ತಗುಲಿದೆ. ಒದ್ದಾಡುತ್ತಿದ್ದ ಅವರನ್ನು ನೋಡಿ ಓಡಿ ಬಂದು ಪುತ್ರ ಮಂಜುನಾಥ ತಂದೆಯನ್ನು ಕಾಪಾಡಲು ಮುಂದಾದರು. ಆವರಿಗೂ ವಿದ್ಯುತ್ ತಗುಲಿದ್ದರಿಂದ ಸಾವು ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಭು ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಮಂಜುನಾಥ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಕೆಲವೇ ನಿಮಿಷಗಳಲ್ಲಿ ಕೊನೆಯುಸಿರೆಳೆದರು.

ಘಟನೆಯಿಂದ ಗ್ರಾಮದಲ್ಲಿ ಭಯದ ವಾತಾವರಣ ಆವರಿಸಿದೆ. ಮೃತರ ಕುಟುಂಬದವರ ಆಕ್ರಂದನ‌ ಮುಗಿಲು ಮುಟ್ಟಿದೆ.

ಹೆಸ್ಕಾಂ ವಿರುದ್ಧ ಆಕ್ರೋಶ

'ಈ ಸಾವಿಗೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಮನೆ ಮುಂದೆ ಹಾಕಲಾಗಿದ್ದ ವಿದ್ಯುತ್ ಕಂಬ ತೆರುವುಗೊಳಿಸಿ ಎಂದು ಸಾಕಷ್ಡ ಸಲ ತಿಳಿಸಿದ್ದರೂ ಗಮನ ಹರಿಸಿರಲಿಲ್ಲ. ಇದರಿಂದ ಜೀವ ಹಾನಿ ಸಂಭವಿಸಿದೆ' ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT