ಸೋಮವಾರ, ಸೆಪ್ಟೆಂಬರ್ 28, 2020
21 °C

ಪತ್ರಿಕಾ ವಿತರಕರಿಗೆ ಸತ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಲಗಿ: ಇಲ್ಲಿನ ಪ್ರೆಸ್ ಕ್ಲಬ್ ವತಿಯಿಂದ ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಪತ್ರಿಕಾ ವಿತರಕರನ್ನು ಶುಕ್ರವಾರ ಸತ್ಕರಿಸಲಾಯಿತು.

ಸಿದ್ದಾರೂಢ ಪೂಜೇರಿ, ಪ್ರಜ್ವಲ ಪುಟಾಣಿ, ವಿನೋದ ಕಂಕಣವಾಡಿ, ಅಜಯ ಗುಡ್ಲಮನಿ, ವಿಶಾಲ ಬುಗಡಿಕಟ್ಟಿ, ಶಿವಬಸು ಜೀರಗಿ, ಸಿದ್ದಪ್ಪ ಕಪ್ಪಲಗುದ್ದಿ, ಅಮಿತಕುಮಾರ ನಾಗಪ್ಪಗೋಳ, ಧರೆಪ್ಪ ಕಪ್ಪಲಗುದ್ದಿ, ಸಚಿನ್ ಪತ್ತಾರ, ಬಂದೇನವಾಜ ಮುಲ್ಲಾ ಹಾಗೂ ಸುರೇಶ ಬೆಳವಿ ಅವರನ್ನು ಸನ್ಮಾನಿಸಲಾಯಿತು.

ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ, ‘ಪತ್ರಿಕೆ ವಿತರಣೆ ಸಣ್ಣ ಕೆಲಸವಲ್ಲ. ಎಲ್ಲ ಕೆಲಸಕ್ಕೂ ಅದರದೇ ಆದ ಗೌರವವಿದೆ. ಬೆಳಿಗ್ಗೆ ಪತ್ರಿಕೆಗಳು ಮನೆಗೆ ಬರದಿದ್ದರೆ ಎಲ್ಲರಿಗೂ ನೆನಪಾಗುವುದು ವಿತರಕರೆ. ಅವರು ಕೊರೊನಾ ಸಮಯದಲ್ಲೂ ಪ್ರಾಣಕ್ಕೆ ಹೆದರದೆ ಸಮಯಕ್ಕೆ ಸರಿಯಾಗಿ ಪತ್ರಿಕೆಗಳನ್ನು ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಉಮೇಶ ಬೆಳಕೂಡ ಅತಿಥಿಯಾಗಿದ್ದರು. ಮೂಡಲಗಿ ಪ್ರೆಸ್ ಕ್ಲಬ್ ಅಧ್ಯಕ್ಷ ಸುಧಾಕರ ಉಂದ್ರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಲ್ತಾಫ ಹವಾಲ್ದಾರ, ಕಲಾವಿದ ಮಂಜುನಾಥ್ ರೇಳೆಕರ ಹಾಗೂ ಚುಟುಕುಸಾಬ ಜಾತಗಾರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು