ನಿಪ್ಪಾಣಿ(ಬೆಳಗಾವಿ ಜಿಲ್ಲೆ): ನಗರದಲ್ಲಿ ಜೂನ್ 29ರಂದು ‘ಬಕ್ರೀದ್’ ಆಚರಣೆ ನಡೆಯಲಿದೆ. ಇದರ ಅಂಗವಾಗಿ ಕುರ್ಬಾನಿ(ಪ್ರಾಣಿಬಲಿ) ನೀಡುವುದನ್ನು ಮುಸ್ಲಿಮರು ಒಂದು ದಿನ ಮುಂದೂಡಿ ಸಾಮರಸ್ಯ ಮೆರೆದಿದ್ದಾರೆ.
ಇಲ್ಲಿನ ಬಾಗವಾನ್ ಗಲ್ಲಿಯಲ್ಲಿರುವ ವಿಠ್ಠಲ-ರುಕ್ಮಿಣಿ ಮಂದಿರದಲ್ಲಿ ಗುರುವಾರ ‘ಆಷಾಢ ಏಕಾದಶಿ’ ನಡೆಯಲಿದೆ. ಈ ದೇವಸ್ಥಾನಕ್ಕೆ ರಾಜ್ಯ ಹಾಗೂ ಹೊರರಾಜ್ಯದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅಂದೇ ಬಕ್ರೀದ್ ಇದ್ದು, ಕುರ್ಬಾನಿ ನೀಡುವುದನ್ನು ಒಂದು ದಿನ ಮುಂದೂಡುವಂತೆ ವಿಠ್ಠಲ ಮಂದಿರದ ಟ್ರಸ್ಟಿಗಳು ಮನವಿ ಮಾಡಿದ್ದರು.
ಇದಕ್ಕೆ ಮುಸ್ಲಿಮರು ಒಪ್ಪಿಗೆ ಸೂಚಿಸಿದ್ದು, ಹಬ್ಬದ ದಿನದಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಮಾರನೇ ದಿನ ಕುರ್ಬಾನಿ ನೀಡಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.